Dailyhunt
BIG BREAKING : 'ಆದಾಯ ತೆರಿಗೆ ಪಾವತಿ'ಗೆ ಜೂನ್ 30ರ ವರೆಗೆ ಅವಧಿ ವಿಸ್ತರಣೆ

BIG BREAKING : 'ಆದಾಯ ತೆರಿಗೆ ಪಾವತಿ'ಗೆ ಜೂನ್ 30ರ ವರೆಗೆ ಅವಧಿ ವಿಸ್ತರಣೆ

Kannada News Now 6 years ago

ನವದೆಹಲಿ : ಕೊರೊನಾ ವೈರಸ್ ಎಫೆಕ್ಟ್ ನಿಂದಾಗಿ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಕುಸಿತ ಕಂಡು ಬಂದಿರುವ ಹಿನ್ನಲೆಯಲ್ಲಿ, 2018-19ನೇ ವರ್ಷದ ಆದಾಯ ತೆರಿಗೆ ಪಾವತಿಸಲು ದೇಶದ ಜನರಿಗೆ ಜೂನ್ 30, 2020ರ ವರೆಗೆ ಅವಧಿಯನ್ನು ವಿಸ್ತರಣೆ ಮಾಡಿ, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಮನ್ ಘೋಷಣೆ ಮಾಡಿದ್ದಾರೆ.

ಈ ಕುರಿತಂತೆ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 2018-19ನೇ ಸಾಲಿನ ಆದಾಯ ತೆರಿಗೆ ಮೇಲಿನ ಬಡ್ಡಿ ದರವನ್ನು 12ರಿಂದ 9ಕ್ಕೆ ಇಳಿಕೆ ಮಾಡಲಾಗಿದೆ. ಆದಾಯ ತೆರಿಗೆ ಪಾವತಿಸಲು ಇದ್ದಂತ ಮಾರ್ಚ್ 31ರ ಕೊನೆಯ ದಿನಾಂಕವನ್ನು ಮುಂಬರುವ ಜೂನ್ 30, 2020ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಇನ್ನು ಮುಂದುವರೆದೆ ಪ್ಯಾನ್ ಕಾರ್ಡ್ ಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಕೂಡ ವಿಸ್ತರಣೆ ಮಾಡಲಾಗಿದ್ದು, ಜೂನ್ 30, 2020ರ ವರೆಗೆ ವಿಸ್ತರಣೆ ಮಾಡಲಾಗಿದೆ.

ಅಲ್ಲದೇ ಟಿಡಿಎಸ್ ಕಟ್ಟಲು ಸಹ ಜೂನ್ 30, 2020 ಕೊನೆಯ ದಿನಾಂಕವಾಗಿದ್ದು, ಟಿಡಿಎಸ್ ಮೇಲಿನ ಬಡ್ಡಿದರವನ್ನು 12ರಿಂದ 9ಕ್ಕೆ ಇಳಿಕೆ ಮಾಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now