Kannada News Now
1.7M Followersವರದಿ: ವಸಂತ ಬಿ ಈಶ್ವರಗೆರೆ
ಬೆಂಗಳೂರು: ಕಳೆದ ಮೇ.26 ಮತ್ತು 27ರಂದು ನಡೆದಿದ್ದಂತ 15,000 ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ( Teacher Recruitment 2022 ) ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರವನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ( School Education Department ) ಮಾಹಿತಿ ಬಿಡುಗಡೆ ಮಾಡಿದ್ದು, 2022ರ ಪದವೀಧರ ಪ್ರಾಥಮಿಕ ಶಿಕ್ಷಕರ ( 6 ರಿಂದ 8ನೇ ತರಗತಿ ) ನೇಮಕಾತಿ ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2ರ ಕೀ ಉತ್ತರಗಳನ್ನು ಇಲಾಖಾ ವೆಬ್ ಸೈಟ್ ï https://schooleducation.kar.nic.in ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದೆ.
BIG NEWS: ರಾಜ್ಯಾಧ್ಯಂತ 'ಪಠ್ಯಪುಸ್ತಕ ಪರಿಷ್ಕರಣೆ' ವಿವಾದವಾದ್ರೇ, ಈ 'ಶಾಲೆ'ಯ ಹೆಸರೇ ವಿವಾದ.!
15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗಾಗಿ ನಡೆದಂತ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರಗಳಿಗೆ ಆಕ್ಷಏಪಣೆಗಳನ್ನು ದಿನಾಂಕ 03-06-2022 ರಿಂದ 10-06-2022ರೊಳಗಾಗಿ ಸಲ್ಲಿಸುವಂತೆ ತಿಳಿಸಿದೆ. ಈ ದಿನಾಂಕದ ನಂತ್ರ ಬಂದಂತ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.
ಅಂದಹಾಗೇ ಕೀ ಉತ್ತರಗಳಿಗೆ ಅಭ್ಯರ್ಥಿಗಳು ï http://schooleducation.kar.nic.in ಲಿಂಕ್ , ಆನ್ ಲೈನ್ ನಲ್ಲಿ ಮಾತ್ರವೇ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದರ ಹೊರತಾಗಿ ಆಫ್ ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ.
ಇದಲ್ಲದೇ ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಜರ್ನಲ್, ನಿಯತಕಾಲಿಕೆ, ವೈಯಕ್ತಿಕ ಪ್ರಕಟಣೆಗಳು, ಗೈಡ್ಸ್ ಹಾಗೂ ಅಂತರ್ಜಾಲ ಮೂಲಗಳು ( ವಿಕಿಪೀಡಿಯ, ಗೂಗಲ್ ಇತರೆ ) ಹಾಗೂ ಪತ್ರಿಕಾ ಲೇಖನಗಳು ಇವುಗಳನ್ನು ಪೂರಕ ದಾಖಲೆಗಳೆಂದು ಪರಿಗಣಿಸಲಾಗುವುದಿಲ್ಲ. ಸಲ್ಲಿಸಿದ ದಾಖಲೆಗಳಲ್ಲಿ ಸ್ಪಷ್ಟತೆ ಇಲ್ಲದಿದ್ದಲ್ಲಿ, ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.
ಅಭ್ಯರ್ಥಿಯು ಸಲ್ಲಿಸುವ ಪ್ರತಿ ಆಕ್ಷೇಪಣೆಗೆ ಪೂರಕ ದಾಖಲೆಗಳೊಂದಿಗೆ ರೂ.50 ಸಂಸ್ಕರಣಾ ಶುಲ್ಕವಾಗಿ ಪಾವತಿಸುವುದು ಕಡ್ಡಾಯವಾಗಿದೆ. ನಿಗದಿತ ಶುಲ್ಕ ಮತ್ತು ಸೂಕ್ತ ದಾಖಲೆಯನ್ನು ಸಲ್ಲಿಸಿದ್ದಲ್ಲಿ ಮಾತ್ರ ಆಕ್ಷೇಪಣೆಯನ್ನು ಸ್ವೀಕರಿಸಲಾಗುವುದು ಎಂದು ತಿಳಿಸಿದೆ.
ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಮನಗ ಮೇಲೆ ಹಲ್ಲೆ: ಪೊಲೀಸ್ ಪೇದೆ ಸಸ್ಪೆಂಡ್.!
ಕೀ ಉತ್ತರ ಡೌನ್ ಲೋಡ್ ಮಾಡಲು ಈ ಕ್ರಮ ಅನುಸರಿಸಿ
ಶಿಕ್ಷಕರ ನೇಮಕಾತಿಗೆ ಪರೀಕ್ಷೆ ಬರೆದಿದ್ದಂತ ಅಭ್ಯರ್ಥಿಗಳು ತಮ್ಮ ವರ್ಷನ್ ಕೋಡ್ ವಾರು ಕೀ ಉತ್ತರಗಳನ್ನು http://schooleducation.kar.nic.in ಈ ಲಿಂಕ್ ಒತ್ತಿ ಜಾಲತಾಣಕ್ಕೆ ಭೇಟಿ ನೀಡಬೇಕು.
ಈ ಬಳಿಕ ಅಭ್ಯರ್ಥಿಗಳು ತೆರೆದುಕೊಳ್ಳುವಂತ ಮುಖ ಪುಟದಲ್ಲಿ GPTR-2022 Online objection form for the Key Answers ಎಂಬಲ್ಲಿ ದರೇ, ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರಗಳನ್ನು ಡೌನ್ ಲೋಡ್ ಮಾಡಬಹುದಾಗಿದೆ.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now