Wednesday, 28 Apr, 8.08 pm Kannada News Now

ಭಾರತ
BIG BREAKING NEWS : 'ಸೀರಮ್'ನ 'ಸಿಇಒ ಅಡಾರ್ ಪೂನಾವಾಲಾ'ಗೆ 'ವೈ ವರ್ಗ'ದ ಭದ್ರತೆ ಕಲ್ಪಿಸಿ, ಕೇಂದ್ರ ಸರ್ಕಾರ ಆದೇಶ

ನವದೆಹಲಿ : ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಅದಾರ್ ಪೂನಾವಾಲಾ ಅವರು 'ವೈ' ವರ್ಗದ ಭದ್ರತಾ ರಕ್ಷಣೆಯನ್ನು ಪಡೆಯಲಿದ್ದಾರೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಬುಧವಾರ ಅಧಿಸೂಚನೆಯಲ್ಲಿ ತಿಳಿಸಿದೆ.

'ವೈ' ವರ್ಗದ ಭದ್ರತೆಯು ಒಬ್ಬರು ಅಥವಾ ಇಬ್ಬರು ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 11 ಸಿಬ್ಬಂದಿಯನ್ನು ಒಳಗೊಂಡಿದೆ.

ಅಂದಹಾಗೇ, ರಾಜ್ಯಗಳಿಗೆ ನೀಡುವ ಕೋವಿಶೀಲ್ಡ್ ಬೆಲೆಯನ್ನು ಶೇಕಡಾ 25 ರಷ್ಟು ಇಳಿಸಲಾಗಿದೆ ಅಂತ ಆದರ್ ಪೂನವಾಲಾ ಘೋಷಿಸಿದ್ದರು. ಅವರು ಈ ಬಗ್ಗೆ ಮಾಧ್ಯಮಗಳಿಗೆ ಟ್ವಿಟರ್‌ನಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ರಾಜ್ಯಗಳ ಹಣವನ್ನು ಉಳಿಸುವ ಹಿತದೃಷ್ಟಿಯಿಂದ ಈ ಲೋಕೋಪಕಾರಿ ನಿರ್ಧಾರವನ್ನು ತೆಗೆದುಕೊಂಡಿದೆ ಅಂತ ಹೇಳಿದ್ದಾರೆ.

ಇದೇ ವೇಳೆ ಅವರು ನಾನು ಈ ಮೂಲಕ ರಾಜ್ಯಗಳಿಗೆ ನೀಡುವ ಬೆಲೆಯನ್ನು 400 ರಿಂದ 300 ರೂ.ಗೆ ಇಳಿಸುತ್ತೇನೆ, ತಕ್ಷಣದಿಂದ ಜಾರಿಗೆ ಬರುತ್ತದೆ ಇದು ಮುಂದೆ ಸಾವಿರಾರು ಕೋಟಿ ಹಣವನ್ನು ರಾಜ್ಯಗಳಿಗೆ ಉಳಿಸುತ್ತದೆ, ಈ ಮೂಲಕ ಹೆಚ್ಚಿನ ವ್ಯಾಕ್ಸಿನೇಷನ್ ನೀಡಿ ಮತ್ತು ಅಸಂಖ್ಯಾತ ಜೀವಗಳನ್ನು ಉಳಿಸಿ ಅಂಥ ಅವರು ಮನವಿ ಮಾಡಿಕೊಂಡಿದ್ದಾರೆ.



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top