Kannada News Now

1.7M Followers

BIG BREAKING NEWS : 'ಸುಳ್ಳು ಜಾತಿಪ್ರಮಾಣ ಪತ್ರ' ಪಡೆದಿರೋದು ಸಾಬೀತಾದ್ರೇ 'ಕ್ರಿಮಿನಲ್ ಕೇಸ್' - ಸರ್ಕಾರ ಆದೇಶ

01 Sep 2021.2:54 PM

ಬೆಂಗಳೂರು : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣ ಪತ್ರ ( Fake Cast Certificate ) ಪಡೆದಿರೋದು ಸಾಬೀತಾದ್ರೇ.. ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸೋದಾಗಿ ರಾಜ್ಯ ಸರ್ಕಾರ ಆದೇಶಿಸಿದೆ.

ಸಿ.ಟಿ.ರವಿಯಂತ ನಾಯಕರಿಗೆ ಧರ್ಮ ರಾಜಕೀಯವಾಗಿರಬಹುದು, ಕಾಂಗ್ರೆಸ್ ಗೆ ಅಲ್ಲ - ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಕಿಡಿ

ಈ ಕುರಿತಂತೆ ರಾಜ್ಯದ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಅವರು, ಡಿಜಿಪಿಯಿಂದ ಅನುಮೋದಿಸಲ್ಪಟ್ಟಂತ ಸುತ್ತೋಲೆಯನ್ನು ಪೊಲೀಸ್ ಅಧೀಕ್ಷಕರಿಗೆ ಹೊರಡಿಸಿದ್ದು, ಒಬ್ಬ ವ್ಯಕ್ತಿಯು ಪರಿಶಿಷ್ಟ ಜಾತಿ, ಪಂಗಡದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವುದು ವಿಚಾರಣೆಯಿಂದ ಸಾಬೀತಾದ ನಂತ್ರ, ಅಂತಿಮ ಆದೇಶಕ್ಕಾಗಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಕಳುಹಿಸಿಕೊಡಲಾಗುತ್ತಿದ್ದು, ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯವರು ಅಸಿಂಧುಗೊಳಿಸಿದ ನಂತ್ರ, ತಹಶೀಲ್ದಾರ್ ರವರು ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಿದ ನಂತ್ರ ಎದುರುದಾರರ ವಿರುದ್ಧ ಮಾತ್ರ ಕ್ರಿಮಿನಲ್ ಪ್ರಕರಣ ದಾಖಲಿಸುವುದು ರೂಢಿಯಲ್ಲಿರುತ್ತದೆ.

Vaccine Utsav : ರಾಜ್ಯಾದ್ಯಂತ 'ವಿಶೇಷ ಲಸಿಕಾ ಉತ್ಸವ' ಹಿನ್ನಲೆ : 'ಕೊರೋನಾ ಲಸಿಕೆ'ಗಾಗಿ ಮುಗಿಬಿದ್ದ ಜನರು

ಇನ್ಮುಂದೆ ಈ ಕೆಳಕಂಡ ಮಾಹಿತಿಯನ್ನು ಸಂಗ್ರಹಿಸಿ, ಕ್ರಿಮಿನಲ್ ಪ್ರಕರಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದಾರೆ.

  • ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ವ್ಯಕ್ತಿಯ ಹೆಸರು
  • ಸುಳ್ಳು ಜಾತಿ ಪ್ರಮಾಣ ಪತ್ರ ವಿತರಿಸಿದ ಹಿಂದಿನ ತಹಶೀಲ್ದಾರ್ ಹೆಸರು
  • ಸುಳ್ಳು ಜಾತಿ ಪ್ರಮಾಣಪತ್ರ ವಿತರಿಸಲು ವರದಿ ಸಲ್ಲಿಸಿದ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಯವರ ಹೆಸರು ಮತ್ತು ವಿವರಗಳನ್ನು ತಪ್ಪದೇ ನಮೂದಿಸುವುದು.

ಈ ಮೂಲಕ ಇದುವರೆಗೆ ವ್ಯಕ್ತಿಯ ವಿರುದ್ಧ ಮಾತ್ರ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತಿತ್ತು. ಇದೀಗ ಸುಳ್ಳು ಜಾತಿ ಪ್ರಮಾಣ ಪತ್ರಕ್ಕೆ ವರದಿ ನೀಡಿದವರು, ಅದಕ್ಕೆ ಅನುಮತಿಸಿದ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags