Kannada News Now
1.7M Followersನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ತೀವ್ರ ಮಟ್ಟದಲ್ಲಿ ಏರಿಕೆಯಾಗ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಲೋಕಸೇವಾ ಆಯೋಗವು ಜೂನ್ 27, 2021 ಕ್ಕೆ ನಿಗದಿಯಾಗಿದ್ದ ಯುಪಿಎಸ್ಸಿ ಪ್ರಿಲಿಮ್ಸ್ 2021 ಪರೀಕ್ಷೆಯನ್ನ ಮುಂದೂಡಿದೆ.
'ಕೊರೊನಾ ಸೋಂಕಿನಿಂದ ಉಂಟಾದ ಪ್ರಸ್ತುತ ಪರಿಸ್ಥಿತಿಗಳಿಂದಾಗಿ, ಕೇಂದ್ರ ಲೋಕಸೇವಾ ಆಯೋಗವು ನಾಗರಿಕ ಸೇವೆಗಳ (ಪೂರ್ವಭಾವಿ) ಪರೀಕ್ಷೆ 2021 ಅನ್ನು ಮುಂದೂಡಿದೆ. ಇದು 2021 ರ ಜೂನ್ 27 ರಂದು ನಡೆಯಬೇಕಾಗಿತ್ತು. ಈಗ ಈ ಪರೀಕ್ಷೆ ಅಕ್ಟೋಬರ್ 10, 2021 ರಂದು ನಡೆಯಲಿದೆ 'ಎಂದು ಯುಪಿಎಸ್ಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Union Public Service Commission postpones the Civil Services (Preliminary) Examination 2021 to 10th October 2021
The examination was scheduled to be held on 27th June pic.twitter.com/h8v9k8zieo
— ANI (@ANI) May 13, 2021
ಸಧ್ಯದ ಬಿಕ್ಕಟ್ಟಿನಿಂದಾಗಿ ಯುಪಿಎಸ್ಸಿ ಇತ್ತೀಚೆಗೆ ಹಲವಾರು ಪರೀಕ್ಷೆಗಳನ್ನ ಮುಂದೂಡಿದೆ.
ಅಂದ್ಹಾಗೆ, ಕೋವಿಡ್ ಪ್ರಕರಣಗಳ ಹೆಚ್ಚಳದ ನಡುವೆ ಹಲವಾರು ಅಭ್ಯರ್ಥಿಗಳು ಪರೀಕ್ಷೆಯನ್ನು ಮುಂದೂಡಲು ಅಥವಾ ರದ್ದುಗೊಳಿಸಲು ಒತ್ತಾಯಿಸುತ್ತಿದ್ದರು.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now