ಕರ್ನಾಟಕ
BIG BREAKING: ರಾಗಿಣಿಯಾಯ್ತು ಈಗ ನಟಿ ಸಂಜನಾಗೂ ಜೈಲು: 2 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದ ಕೋರ್ಟ್..!

ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾರ ಸಿಸಿಬಿ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಜಡ್ಜ್ ಮುಂದೆ ಹಾಜರು ಪಡಿಸಲಾಗಿತ್ತು. ಸಧ್ಯ ಕೋರ್ಟ್ ತನ್ನ ಆದೇಶ ನೀಡಿದ್ದು, ನಟಿ ಸಂಜನಾರನ್ನ 2 ದಿನಗಳ ಕಾಲ ನ್ಯಾಯಂಗ ಬಂಧನಕ್ಕೆ ನೀಡಿದೆ.
1ನೇ ಎಸಿಎಂಎಂ ನ್ಯಾಯಾಲಯದಿಂದ ತೀರ್ಪು ಪ್ರಕಟವಾಗಿದ್ದು, ವಿಚಾರಣಾಧೀನ ಖೈದಿಯಾಗಿ ಪರಪ್ಪನ ಅಗ್ರಹಾರ ಸೇರಲಿರುವ ನಟಿ ಸಂಜನಾ 2 ದಿನಗಳ ಕಾಲ ಸೆರೆಮನೆ ವಾಸ ಅನುಭವಿಸಲಿದ್ದಾರೆ.
ಕಳೆದ 11 ದಿನಗಳಿಂದ ಸಿಸಿಬಿ ವಶದಲ್ಲಿರುವ ನಟಿ ಸಂಜನಾ ಸಧ್ಯ 2 ದಿನಗಳ ಕಾಲ ಮಾತ್ರ ಪರಪ್ಪನ ಅಗ್ರಹಾರ ಸೇರಲಿದ್ದಾರೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊನ್ನೆಯಷ್ಟೇ ವಿಶೇಷ ನ್ಯಾಯಾಲಯ ನಟಿ ರಾಗಿಣಿ ಸೇರಿ 5 ಆರೋಪಿಗಳನ್ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತ್ತು.
Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now