Dailyhunt Logo
  • Light mode
    Follow system
    Dark mode
    • Play Story
    • App Story
BIG NEWS: ಬೇಸೂರು ಅಣು ವಿದ್ಯುತ್ ಸ್ಥಾವರಕ್ಕೆ ತೀವ್ರ ವಿರೋಧ: ಮೇ.7ರಂದು ಸಾಗರದಲ್ಲಿ ಬೃಹತ್ ಪ್ರತಿಭಟನೆ

BIG NEWS: ಬೇಸೂರು ಅಣು ವಿದ್ಯುತ್ ಸ್ಥಾವರಕ್ಕೆ ತೀವ್ರ ವಿರೋಧ: ಮೇ.7ರಂದು ಸಾಗರದಲ್ಲಿ ಬೃಹತ್ ಪ್ರತಿಭಟನೆ

Kannada News Now 1 month ago

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಪರಿಸರ ಸೂಕ್ಷ್ಮ ಪ್ರದೇಶವಾದ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಪ್ರಸ್ತಾವನೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಯೋಜನೆಯು ತಾಲ್ಲೂಕಿನ ಭವಿಷ್ಯಕ್ಕೆ ಮಾರಕವಾಗಿದ್ದು, ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಅಣು ಸ್ಥಾವರಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಆರ್.

ಜಯಂತ್ ಎಚ್ಚರಿಸಿದ್ದಾರೆ.

ಕೋಳೂರು ಗ್ರಾಮದ ಬೇಸೂರು ಬಸವಣ್ಣ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹೋರಾಟದ ಪ್ರಮುಖ ಅಂಶಗಳು:

  • ಒಕ್ಕಲೆಬ್ಬಿಸುವ ಭೀತಿ: ಬೇಸೂರು ಭಾಗದ ಜನರು ಈಗಾಗಲೇ ಎರಡು ಬಾರಿ ಮುಳುಗಡೆಯ ಸಂಕಷ್ಟ ಎದುರಿಸಿ ಬದುಕು ಕಟ್ಟಿಕೊಂಡಿದ್ದಾರೆ. ಈಗ ಮತ್ತೆ ಅವರನ್ನು ಒಕ್ಕಲೆಬ್ಬಿಸಿದರೆ ಅವರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗುತ್ತದೆ. ಪುನರ್ವಸತಿಗೆ ಭೂಮಿ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ.

  • ಪರಿಸರ ಹಾನಿ: ಅಣು ಸ್ಥಾವರ ನಿರ್ಮಾಣವಾದ ಕಡೆಗಳಲ್ಲಿ ಉಂಟಾಗಿರುವ ಧಾರುಣ ಸ್ಥಿತಿಯನ್ನು ನಾವು ನೋಡಿದ್ದೇವೆ. ಮಲೆನಾಡಿನಂತಹ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಇಂತಹ ಯೋಜನೆ ಜಾರಿಯಾಗುವುದು ಅಳಿವು ಉಳಿವಿನ ಪ್ರಶ್ನೆಯಾಗಿದೆ.

  • ಅಹೋರಾತ್ರಿ ಧರಣಿ: ಯೋಜನೆ ಕೈಬಿಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾವಿರಾರು ಜನರೊಂದಿಗೆ ಅಹೋರಾತ್ರಿ ಧರಣಿ ನಡೆಸಲು ಸಿದ್ಧರಾಗಬೇಕು ಎಂದು ಜಯಂತ್ ಕರೆ ನೀಡಿದರು.

ಮಲೆನಾಡು ಮಸಣವಾಗುವುದು ಬೇಡ:

ಮಲೆನಾಡು ರೈತ ಹೋರಾಟ ವೇದಿಕೆ ಅಧ್ಯಕ್ಷ ತೀ.ನ. ಶ್ರೀನಿವಾಸ್ ಮಾತನಾಡಿ, "ಹೊಸ ಹೊಸ ಯೋಜನೆಗಳನ್ನು ಹೇರುವ ಮೂಲಕ ಮಲೆನಾಡನ್ನು ಮಸಣ ಮಾಡುವ ಪ್ರಯತ್ನ ನಡೆಯುತ್ತಿದೆ. ಅಧಿಕಾರಿಗಳು ಜನಪ್ರತಿನಿಧಿಗಳ ಮಾತನ್ನೂ ಕೇಳದೆ ವರ್ತಿಸುತ್ತಿದ್ದಾರೆ. ಇದರ ವಿರುದ್ಧ ಲಕ್ಷಾಂತರ ಜನರ ಒಮ್ಮತದ ಧ್ವನಿ ಮೊಳಗಬೇಕು" ಎಂದರು.

ಮೇ 7ರಂದು ಬೃಹತ್ ಪ್ರತಿಭಟನೆ:

ಹೋರಾಟ ಸಮಿತಿ ಅಧ್ಯಕ್ಷ ಬಿ.ಎ. ಇಂದೂಧರ ಬೇಸೂರು ಮಾತನಾಡಿ, ಮೇ 7ರಂದು ನಡೆಯಲಿರುವ ಪ್ರತಿಭಟನೆಯ ರೂಪರೇಷೆಗಳನ್ನು ಪ್ರಕಟಿಸಿದರು:

  • ಸಮಯ: ಮೇ 7ರಂದು ಬೆಳಿಗ್ಗೆ 10 ಗಂಟೆಗೆ.

  • ಸ್ಥಳ: ಸಾಗರದ ಶಿವಪ್ಪನಾಯಕ ವೃತ್ತದಿಂದ ಬೃಹತ್ ಮೆರವಣಿಗೆ ಆರಂಭವಾಗಿ ಗಾಂಧಿ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ.

  • ಉದ್ದೇಶ: ಸಮಾವೇಶದ ನಂತರ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.

  • ಸಹಭಾಗಿತ್ವ: ಈ ಜನಾಂದೋಲನವು ಪಕ್ಷಾತೀತವಾಗಿ ನಡೆಯಲಿದ್ದು, ಪರಿಸರ ಸಂಘಟನೆಗಳು ಮತ್ತು ವಿವಿಧ ಸಂಸ್ಥೆಗಳು ಪಾಲ್ಗೊಳ್ಳಲಿವೆ.

ಸಭೆಯಲ್ಲಿ ಪ್ರಮುಖರಾದ ಬಸಪ್ಪ, ಗಂಗಾಧರ ಗೌಡ, ಅಶೋಕ, ಹಾಲಪ್ಪ ಗೌಡ, ಶೋಭಾ, ಯಶೋಧ, ರೂಪಾ, ಶಾರದಾ, ನಾರಾಯಣ ಇನ್ನಿತರರು ಉಪಸ್ಥಿತರಿದ್ದರು.

ನಾಳೆ ಶಿಕ್ಷಕರ ಸಂಘದ ಚುನಾವಣೆ: ಸಾಗರದಲ್ಲಿ 'ಸ್ವಾಭಿಮಾನಿ ತಂಡ'ದಿಂದ ಭರ್ಜರಿ ಪ್ರಚಾರ, ಮತ ನೀಡಲು ಮನವಿ

Dailyhunt
Disclaimer: This content has not been generated, created or edited by Dailyhunt. Publisher: Kannada News Now