Dailyhunt Logo
  • Light mode
    Follow system
    Dark mode
    • Play Story
    • App Story
BIG NEWS : ದೇಶದಲ್ಲಿ ಆನ್‌ ಲೈನ್ ಗೇಮಿಂಗ್‌ ಗೆ ಬ್ರೇಕ್: ಇಂದಿನಿಂದ ಹೊಸ ಕಾಯ್ದೆ ಜಾರಿ, ನಿಯಮ ಉಲ್ಲಂಘಿಸಿದರೆ ಜೈಲು ಫಿಕ್ಸ್.!

BIG NEWS : ದೇಶದಲ್ಲಿ ಆನ್‌ ಲೈನ್ ಗೇಮಿಂಗ್‌ ಗೆ ಬ್ರೇಕ್: ಇಂದಿನಿಂದ ಹೊಸ ಕಾಯ್ದೆ ಜಾರಿ, ನಿಯಮ ಉಲ್ಲಂಘಿಸಿದರೆ ಜೈಲು ಫಿಕ್ಸ್.!

Kannada News Now 2 weeks ago

ವದೆಹಲಿ: ದೇಶದ ಯುವಜನತೆಯನ್ನು ಆವರಿಸಿರುವ ಆನ್‌ಲೈನ್ ಗೇಮಿಂಗ್ ಚಟ, ಹಣದ ನಷ್ಟ ಮತ್ತು ಅದರಿಂದ ಸಂಭವಿಸುವ ಆತ್ಮಹತ್ಯೆ ಹಾಗೂ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಭರ್ಜರಿ ಪ್ಲಾನ್ ಮಾಡಿದೆ. 'ಆನ್‌ಲೈನ್ ಗೇಮಿಂಗ್‌ನ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ, 2025' ಇಂದಿನಿಂದ (ಮೇ 1) ಅಧಿಕೃತವಾಗಿ ಜಾರಿಗೆ ಬರುತ್ತಿದ್ದು, ಗೇಮಿಂಗ್ ಜಗತ್ತಿನಲ್ಲಿ ದೊಡ್ಡ ಬದಲಾವಣೆಗಳು ಉಂಟಾಗಲಿವೆ.

ಹೊಸ ಕಾಯ್ದೆಯ ಮುಖ್ಯಾಂಶಗಳು ಮತ್ತು ಕಟ್ಟುನಿಟ್ಟಿನ ನಿಯಮಗಳ ವಿವರ ಇಲ್ಲಿದೆ:

1. ನ್ಯಾಷನಲ್ ಗೇಮಿಂಗ್ ಅಥಾರಿಟಿ (NGA) ಅಸ್ತಿತ್ವಕ್ಕೆ
ಇನ್ನು ಮುಂದೆ ದೇಶದಲ್ಲಿ ಯಾವುದೇ ಆನ್‌ಲೈನ್ ಗೇಮ್ ನಡೆಸಬೇಕೆಂದರೆ ನ್ಯಾಷನಲ್ ಗೇಮಿಂಗ್ ಅಥಾರಿಟಿ (NGA) ಇಂದ ಪರವಾನಗಿ ಪಡೆಯುವುದು ಕಡ್ಡಾಯ. Dream11, MPL, WinZO ನಂತಹ ಪ್ರಮುಖ ಕಂಪನಿಗಳು ಸೇರಿದಂತೆ ಎಲ್ಲಾ ಗೇಮಿಂಗ್ ಸಂಸ್ಥೆಗಳು ಹೊಸ ಲೈಸೆನ್ಸ್ ಪಡೆಯಲೇಬೇಕು.

2. ಗೇಮ್‌ಗಳ ವರ್ಗೀಕರಣ ಮತ್ತು ನಿಷೇಧ

ಗೇಮ್‌ಗಳನ್ನು ಮೂರು ಹಂತಗಳಲ್ಲಿ ವಿಂಗಡಿಸಲಾಗಿದೆ:

ಇ-ಸ್ಪೋರ್ಟ್ಸ್: ಇವುಗಳಿಗೆ ಸಂಪೂರ್ಣ ಕಾನೂನುಬದ್ಧ ಮಾನ್ಯತೆ ನೀಡಲಾಗಿದೆ.

ಸ್ಕಿಲ್ ಗೇಮ್: ಕೌಶಲ ಆಧಾರಿತ ಗೇಮ್‌ಗಳಿಗೆ ಲೈಸೆನ್ಸ್ ಪಡೆಯುವುದು ಕಡ್ಡಾಯ.

ಬೆಟ್ಟಿಂಗ್ ಗೇಮ್: ಆನ್‌ಲೈನ್ ಕ್ಯಾಸಿನೊ, 1XBet ನಂತಹ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ.

3. ಅಪ್ರಾಪ್ತರಿಗೆ ಕಠಿಣ ನಿಯಮ: ಪೋಷಕರೇ ಗಮನಿಸಿ!
ಮಕ್ಕಳು ಗೇಮ್‌ಗೆ ದಾಸರಾಗುವುದನ್ನು ತಪ್ಪಿಸಲು ಸರ್ಕಾರ ಹೊಸ ಮಿತಿಗಳನ್ನು ಹೇರಿದೆ:

ಸಮಯದ ಮಿತಿ: 18 ವರ್ಷದೊಳಗಿನವರು ದಿನಕ್ಕೆ ಕೇವಲ 3 ಗಂಟೆ ಮಾತ್ರ ಆಡಬಹುದು. ರಾತ್ರಿ 11 ರಿಂದ ಬೆಳಿಗ್ಗೆ 6 ರವರೆಗೆ ಆಡುವುದನ್ನು ನಿಷೇಧಿಸಲಾಗಿದೆ.

ಹಣದ ಮಿತಿ: ಮಕ್ಕಳು ಗೇಮ್‌ಗಾಗಿ ತಿಂಗಳಿಗೆ 10,000 ರೂ. ಗಿಂತ ಹೆಚ್ಚು ಖರ್ಚು ಮಾಡುವಂತಿಲ್ಲ.

ಪೋಷಕರ ಅನುಮತಿ: ಯಾವುದೇ ಹಣದ ವಹಿವಾಟು ನಡೆಸಲು ಪೋಷಕರ OTP ಕಡ್ಡಾಯ. ಅಲ್ಲದೆ, ಎಲ್ಲಾ ಗೇಮ್‌ಗಳಿಗೆ ಆಧಾರ್ KYC ಕಡ್ಡಾಯಗೊಳಿಸಲಾಗಿದೆ.

4. ತೆರಿಗೆ ಮತ್ತು ಜಿಎಸ್‌ಟಿ
ಹಣ ಹೂಡಿಕೆ ಮಾಡುವ ಗೇಮ್‌ಗಳ ಡೆಪಾಸಿಟ್ ಮೇಲೆ 28% GST ಮುಂದುವರಿಯಲಿದೆ. ಒಂದು ವೇಳೆ ನೀವು ಗೇಮ್‌ನಲ್ಲಿ 10,000 ರೂ. ಗಿಂತ ಹೆಚ್ಚಿನ ಮೊತ್ತ ಗೆದ್ದರೆ, ಅದರಲ್ಲಿ 30% TDS ಕಡಿತವಾಗಲಿದೆ.

5. ನಿಯಮ ಉಲ್ಲಂಘಿಸಿದರೆ ಭಾರಿ ದಂಡ ಮತ್ತು ಜೈಲು
ಕಂಪನಿಗಳಿಗೆ: ನಿಯಮ ಉಲ್ಲಂಘಿಸುವ ಗೇಮಿಂಗ್ ಕಂಪನಿಗಳಿಗೆ ಮೊದಲ ಬಾರಿ 1 ಕೋಟಿ ರೂ. ಹಾಗೂ ಎರಡನೇ ಬಾರಿ 5 ಕೋಟಿ ರೂ. ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೆ, ಕಂಪನಿಯ CEO ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಸೆಲೆಬ್ರಿಟಿಗಳಿಗೆ: ನಿಷೇಧಿತ ಗೇಮ್‌ಗಳ ಜಾಹೀರಾತು ನೀಡುವ ಇನ್‌ಫ್ಲುಯೆನ್ಸರ್‌ಗಳು ಅಥವಾ ಸೆಲೆಬ್ರಿಟಿಗಳಿಗೆ 50 ಲಕ್ಷ ರೂ. ದಂಡ ಮತ್ತು 1 ವರ್ಷ ಬ್ಯಾನ್ ಶಿಕ್ಷೆ ವಿಧಿಸಲಾಗುತ್ತದೆ.

ಬಳಕೆದಾರರಿಗೆ: ಕದ್ದುಮುಚ್ಚಿ ಬ್ಯಾನ್ ಆದ ಸೈಟ್‌ಗಳಲ್ಲಿ ಗೇಮ್ ಆಡಿದರೆ 10,000 ರೂ. ದಂಡ ವಿಧಿಸಲಾಗುತ್ತದೆ. ಪದೇ ಪದೇ ತಪ್ಪು ಮಾಡಿದರೆ ಕ್ರಿಮಿನಲ್ ಕೇಸ್ ದಾಖಲಾಗಲಿದ್ದು, ಬ್ಯಾಂಕ್ ಖಾತೆ ಕೂಡ ಫ್ರೀಜ್ ಆಗಲಿದೆ.

ಒಟ್ಟಾರೆಯಾಗಿ, ಆನ್‌ಲೈನ್ ಗೇಮಿಂಗ್ ಹೆಸರಿನಲ್ಲಿ ನಡೆಯುವ ವಂಚನೆ ಮತ್ತು ಹಾದಿ ತಪ್ಪಿಸುವ ಕೃತ್ಯಗಳಿಗೆ ಈ ಹೊಸ ಕಾಯ್ದೆ ಮರಣಶಾಸನ ಬರೆಯುವ ನಿರೀಕ್ಷೆಯಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now