ಬೆಂಗಳೂರು : ಕೇರಳದಲ್ಲಿ ಸುರಂಗಮಾರ್ಗ ಕಾಮಗಾರಿ ವೇಳೆ ಭೂಕುಸಿತ ಉಂಟಾಗಿ ಇದುವರೆಗೂ ಇಂಜಿನಿಯರ್, ಸಿಬ್ಬಂದಿಗಳು ಸೇರಿದಂತೆ ಹಲವು ಜನರು ಮಣ್ಣಿನ ಅಡಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಕರ್ನಾಟಕದ ಟ್ಯಾಂಕರ್ ಒಂದು ನಿನ್ನೆ ನಡೆದ ಭೂಕುಸಿತದಲ್ಲಿ ಸುಮಾರು ಐದಾರು ಜನರ ಪ್ರಾಣ ಉಳಿಸಿದೆ.
ಹೌದು ನಿನ್ನೆ ಸುನಾಮಿಯಂತೆ ಬಂದ ಕೆಸರಿಗೆ ಕರ್ನಾಟಕದ ಟ್ಯಾಂಕರ್ ಅಡ್ಡವಾಗಿ ನಿಂತಿದೆ ಈ ಸಂದರ್ಭದಲ್ಲಿ ಐದಾರು ಜನರ ಜೀವ ಉಳಿಸಿದ ಕರ್ನಾಟಕದ ಟ್ಯಾಂಕರ್, ಕೆಸರು ಮಿಶ್ರಿತ ಪ್ರವಾಹಕ್ಕೆ ಟ್ಯಾಂಕರ್ ಅಡ್ಡವಾಗಿ ನಿಂತಿದೆ ಟ್ಯಾಂಕರ್ ಅಡ್ಡ ನಿಂತಿದ್ದರಿಂದಲೇ ಸುಮಾರು ಐದಾರು ಜನರು ಪ್ರಾಣಪಾಯದಿಂದ ಬಚಾವಾಗಿದ್ದಾರೆ. ಕೆಸರಿನಲ್ಲಿ ಸಿಲುಕ ಬೇಕಿದ್ದ ಜನ ಟ್ಯಾಂಕರ್ ನಿಂದ ಪಾರಾಗಿದ್ದಾರೆ.
ಈ ಒಂದು ಟ್ಯಾಂಕರ್ ಕರ್ನಾಟಕದ ರಾಮನಗರದಲ್ಲಿ ನೊಂದಣಿಯಾಗಿದ್ದು KA-42 B-9671 ಈ ಸಂಖ್ಯೆಯ ಟ್ಯಾಂಕರ್ ನಿನ್ನ ಕೇರಳಕ್ಕೆ ತೆರಳಿತ್ತು. ದಿಲೀಪ್ ಬಿಲ್ಡ್ ಕಾನ್ ಲಿಮಿಟೆಡ್ ಗೆ ಈ ಒಂದು ಟ್ಯಾಂಕರ್ ಸೇರಿದ್ದು, ನಿನ್ನೆ ಗುಡ್ಡ ಕುಸಿತದಲ್ಲಿ ಟ್ಯಾಂಕರ್ ಕೊಚ್ಚಿಕೊಂಡು ಬಂದಿದೆ. ಈ ಸಂದರ್ಭದಲ್ಲಿ ಟ್ಯಾಂಕರ್ ಅಡಿಯಲ್ಲಿಯೇ ಕೂಡ ಐದಾರು ಜನರು ಇದ್ದವು ಎಲ್ಲರೂ ತಮ್ಮ ಜೀವ ಉಳಿಸಿಕೊಂಡಿದ್ದಾರೆ.

