ಕರ್ನಾಟಕ
BIG NEWS : ಮಾ.27ರಂದು 'ಕರ್ನಾಟಕ ಬಂದ್' - ವಾಟಾಳ್ ನಾಗರಾಜ್

ಬೆಂಗಳೂರು : ತಮಿಳುನಾಡು ಸರ್ಕಾರ ಪದೇ ಪದೇ ಮಹದಾಯಿ, ಮೇಕೆದಾಟು ಯೋಜನೆಗಳ ಮೂಲಕ ನದಿ ತಿರುವು ಯೋಜನೆಯಲ್ಲಿ ಕಿರಿಕ್ ಮಾಡುತ್ತಿದೆ. ಇಂತಹ ನದಿ ತಿರುವು ಯೋಜನೆಯನ್ನು ಸರ್ಕಾರ ಕೈಬಿಡಬೇಕು. ಇಲ್ಲವಾದಲ್ಲಿ ಮಾರ್ಚ್ 27ರಂದು ಮಹದಾಯಿ, ಮೇಕೆದಾಟು ಯೋಜನೆಗೋಸ್ಕರ ಬಂದ್ ಕರೆ ನೀಡುವ ಜೊತೆಗೆ, ತೈಲ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಬಂದ್ ನಡೆಸಲಾಗುತ್ತದೆ ಎಂಬುದಾಗಿ ಎಚ್ಚರಿಕೆಯನ್ನು ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಮಾರ್ಚ್ 5ರೊಳಗೆ ಕಾವೇರಿ ಯೋಜನೆ ಕೈಬಿಡಲು ಗಡುವು ಇದ್ದು, ರಾಜ್ಯ ಸಂಸದರು ಚಕಾರವೆತ್ತುತ್ತಿಲ್ಲ. ಹೀಗಾಗಿ ಮಾರ್ಚ್ 6ರಂದು ಸಂಸದರನ್ನು ಹರಾಜು ಹಾಕುತ್ತೇವೆ. ಮಾರ್ಚ್ 13ರಂದು ಕನ್ನಂಬಾಡಿ ಚಲೋ, ಮಾರ್ಚ್.20ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ, ತಮಿಳುನಾಡು ಸರ್ಕಾರ ನದಿ ತಿರುವು ಯೋಜನೆ ಕೈಬಿಡದೇ ಇದ್ದರೇ ಮಾರ್ಚ್ 27ರಂದು ಕರ್ನಾಟಕ ಬಂದ್ ಮಾಡುತ್ತೇವೆ ಎಂಬುದಾಗಿ ಹೇಳಿದ್ದಾರೆ.
ಕೇವಲ ನದಿ ನೀರು ಯೋಜನೆ ಕೈಬಿಡುವಂತೆ ಅಷ್ಟೇ ಕರ್ನಾಟಕ ಬಂದ್ ನಡೆಸೋದಿಲ್ಲ. ಇದರೊಂದಿಗೆ ಪೆಟ್ರೋಲ್, ಡಿಸೇಲ್, ಗ್ಯಾಸ್ ದರ ಏರಿಕೆ ಖಂಡಿಸಿಯೂ ಪ್ರತಿಭಟನೆ ನಡೆಸಲಾಗುತ್ತದೆ. ಅಲ್ಲದೇ ರಾಜ್ಯದಲ್ಲಿ ಗ್ರಾನೈಟ್ ಲೂಟಿ ವಿರುದ್ಧವೂ ಧರಣಿ ನಡೆಸಲಾಗುವುದು ಎಂಬುದಾಗಿ ಹೇಳಿದರು.