Kannada News Now

1.7M Followers

BIG NEWS: '15,000 ಶಿಕ್ಷಕರ ಹುದ್ದೆ'ಗೆ ಮಾ.23ರಿಂದ ಅರ್ಜಿ ಸಲ್ಲಿಕೆ ಆರಂಭ, ಮೇ.21, 22ಕ್ಕೆ ಸಿಇಟಿ ಪರೀಕ್ಷೆ ನಿಗದಿ | Teacher Jobs

18 Mar 2022.2:44 PM

ಬೆಂಗಳೂರು: ಶಿಕ್ಷಕರ ಉದ್ಯೋಗಾಕಾಂಕ್ಷಿಗಳು ( Karnataka Teacher Recruitment ) ಎದುರುನೋಡುತ್ತಿದ್ದಂತ 15 ಸಾವಿರ ಶಿಕ್ಷಕರ ನೇಮಕಾತಿಗಾಗಿ ಮಾರ್ಚ್ 21ರಂದು ಅಧಿಸೂಚನೆ ಹೊರಡಿಸಲಾಗುತ್ತಿದೆ. ಮಾರ್ಚ್ 23ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಮೇ 21, 22ಕ್ಕೆ ಸಿಟಿಇ ಪರೀಕ್ಷೆ ಕೂಡ ನಡೆಯಲಿದೆ.

ಈ ಮೂಲಕ ಶಿಕ್ಷಕರ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿಯನ್ನು ರಾಜ್ಯ ಸರ್ಕಾರ ನೀಡಲಿದೆ.

ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ: ಈ ಬಗ್ಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದೇನು ಗೊತ್ತಾ.?

ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ಅವರು, 15,000 ಶಿಕ್ಷಕರ (6-8) ನೇಮಕಕ್ಕೆ ಮಾರ್ಚ್ 21ಕ್ಕೆ ಅಧಿಸೂಚನೆ ಹೊರಡಿಸಲಾಗುತ್ತದೆ. ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ - 23 ಮಾರ್ಚ್, 2022. ಆನ್‌ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 22 ಏಪ್ರಿಲ್ 2022. ಸಿಇಟಿ ಪರೀಕ್ಷೆಯು ಮೇ 21, 22ರಂದು ನಡೆಯಲಿದೆ ಎಂಬುದಾಗಿ ತಿಳಿಸಿದ್ದಾರೆ.

15,000 ಶಿಕ್ಷಕರ (6-8) ನೇಮಕಕ್ಕೆ ಮಾರ್ಚ್ 21ಕ್ಕೆ ಅಧಿಸೂಚನೆ ಹೊರಡಿಸಲಾಗುತ್ತದೆ.

ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ - 23 ಮಾರ್ಚ್, 2022.

ಆನ್‌ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ - 22 ಏಪ್ರಿಲ್ 2022.

ಸಿಇಟಿ ಪರೀಕ್ಷೆ ದಿನಾಂಕ - ಮೇ ತಿಂಗಳ 21 ಮತ್ತು 22.@BSBommai @CMofKarnataka

— B.C Nagesh (@BCNagesh_bjp)

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags