Friday, 24 Sep, 11.48 am Kannada News Now

ಭಾರತ
BIG NEWS : ಮಹಾಂತ್ ನರೇಂದ್ರ ಗಿರಿ ಸಾವಿನ ಪ್ರಕರಣ ಕುರಿತಂತೆ ಸಿಬಿಐನಿಂದಲೂ ತನಿಖೆ

ಉತ್ತರಪ್ರದೇಶ : ಮಹಾಂತ್ ನರೇಂದ್ರ ಗಿರಿ ಅವರ ಸಾವಿನ ಪ್ರಕರಣದ ತನಿಖೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಅನುಮೋದನೆ ನೀಡಿದೆ. ಪ್ರಕರಣ ದಾಖಲಿಸಿ ಶೀಘ್ರದಲ್ಲೇ ತನಿಖೆ ಪ್ರಾರಂಭಿಸುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂಸ್ಥೆಯು ಐದು ಸದಸ್ಯರ ತಂಡವನ್ನು ರಚಿಸಿದೆ. ಅದು ದೆಹಲಿಯಿಂದ ಪ್ರಯಾಗ್ ರಾಜ್ ತಲುಪಿದೆ ಎಂದು ತಿಳಿದು ಬಂದಿದೆ.

ತೈಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ ಟಾಂಗಾ Rally : 'ಟಾಂಗಾ' ಮೂಲಕ ಸರ್ಕಾರಕ್ಕೆ 'ಟಾಂಗ್'

ಮಹಾಂತ್ ನರೇಂದ್ರ ಗಿರಿ ಸಾವಿನ ತನಿಖೆಯನ್ನು ವಹಿಸಿಕೊಂಡಿರುವಂತ ಸಿಬಿಐ ಅಧಿಕಾರಿಗಳ ತಂಡವು, ಇದೀಗ ಬಗಂಹಾರಿ ಮಠಕ್ಕೆ ಭೇಟಿ ನೀಡಿದ್ದು, ಅಲ್ಲಿ ಅಖಿಲ ಭಾರತೀಯ ಅಖಾರಾ ಪರಿಷತ್ ಮುಖ್ಯಸ್ಥ ಮಹಾಂತ್ ನರೇಂದ್ರ ಗಿರಿ ಸಾವಿನ ಪ್ರಕರಣ ಕುರಿತಂತೆ ಮಾಹಿತಿ, ದಾಖಲೆಗಳನ್ನು ಕಲೆ ಹಾಕುತ್ತಿದೆ. ಮತ್ತೊಂದೆಡೆ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡದ (ಎಸ್ ಐಟಿ) ಸದಸ್ಯರನ್ನು ಸಿಬಿಐ ತಂಡ ಭೇಟಿ ಮಾಡಿತು.

BIG NEWS : ಸೆ.27ಕ್ಕೆ ಭಾರತ್ ಬಂದ್ : ಪಾಪ್ಯುಲರ್ ಫ್ರಂಟ್ ನಿಂದ ಸಂಪೂರ್ಣ ಬೆಂಬಲ ಘೋಷಣೆ

ಗಿರಿ ಅವರ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರನ್ನು ತಂಡವು ಪ್ರಶ್ನಿಸಿದೆ ಎಂದು ವರದಿ ಹೇಳಿದೆ. ಮಹಾಂತ್ ಗಿರಿ ಅವರ ಶಿಷ್ಯರ ಹೇಳಿಕೆಗಳನ್ನು ಸಿಬಿಐ ಸ್ಲೀತ್ ಗಳು ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲೇ ಪ್ರಥಮ ಪ್ರಯೋಗ : 'ಹಾವೇರಿ ಜಿಲ್ಲಾ ಪಂಚಾಯ್ತಿ'ಯಿಂದ ವಿನೂತನ ಕಾರ್ಯ, ಕಸ ವಿಲೇವಾರಿಗೆ ನಿಂತ 'ನಾರಿ ಶಕ್ತಿ'



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top