Thursday, 29 Jul, 12.23 pm Kannada News Now

ಕರ್ನಾಟಕ
BIG NEWS : ಮಂಡ್ಯದ 'ಮನ್ ಮುಲ್'ನಲ್ಲಿ ಹಾಲಿಗೆ ನೀರು ಮಿಶ್ರಣ ಪ್ರಕರಣದಲ್ಲಿ ಮತ್ತಿಬ್ಬರು ಅರೆಸ್ಟ್

ಮಂಡ್ಯ : ಜಿಲ್ಲಾ ಹಾಲು ಒಕ್ಕೂಟದಲ್ಲಿ ( mandya manmul ) ಹಾಲು - ನೀರು ಕಲಬೆರೆಕೆ ಪ್ರಕರಣದಲ್ಲಿ ಈಗಾಗಲೇ ಹಲವರ ತಲೆದಂಡವಾಗಿದೆ. ಅಲ್ಲದೇ ಕೆಲವನ್ನು ಬಂಧಿಸಲಾಗಿದೆ. ಇದರ ಮಧ್ಯೆ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿ, ಈ ಪ್ರಕಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಿಬ್ಬರನ್ನು ಬಂಧಿಸಿದೆ.

Karnataka Politics : ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ, ಸಂಪುಟಕ್ಕೆ ಸೇರೋದಿಲ್ಲ - ಜಗದೀಶ್ ಶೆಟ್ಟರ್

ಮಂಡ್ಯದ ಮನ್ ಮುಲ್ ನಲ್ಲಿ ಹಾಲಿಗೆ ನೀರು ಬೆರೆಸಿದಂತ ಪ್ರಕರಣದಲ್ಲಿ ಸಿಐಡಿ ತನಿಖೆಯನ್ನ ( CID Investigation ) ಚುರುಕು ಗೊಳಿಸಿದೆ. ಈಗಾಗಲೇ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿರುವಂತ ಸಿಐಡಿ ಅಧಿಕಾರಿಗಳು, ಬುಧವಾರ ಮಧ್ಯಾಹ್ನ ಇಬ್ಬರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳನ್ನು ಬಂಧಿಸಿದ್ದಾರೆ.

ಈಗಲೂ ನಮ್ಮ ನಾಯಕ ಯಡಿಯೂರಪ್ಪನವರೇ - ಶಾಸಕ ಎಂಪಿ ರೇಣುಕಾಚಾರ್ಯ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಚಿಕ್ಕೋನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರವಿ ಮತ್ತು ಮರಳಿಗ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಮೇಶ್ ಎಂಬುವರನ್ನು ಇಂದು ಮಧ್ಯಾಹ್ನ ಸಿಐಡಿ ಪೊಲೀಸರು ಬಂಧಿಸಿ ನಂತರ ಮದ್ದೂರು ತಾಲ್ಲೂಕು ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಿ ಹೆಚ್ಚಿನ ವಿಚಾರಣೆ‌ ನಡೆಸುವ ಹಿನ್ನಲೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ‌ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Kukke Subramanya Temple : ಇಂದಿನಿಂದ 'ಸುಬ್ರಹ್ಮಣ್ಯ ದೇವಸ್ಥಾನ'ದಲ್ಲಿ 'ಸರ್ಪ ಸಂಸ್ಕಾರ' ಸೇವೆ ಆರಂಭ

ಮನ್ ಮುಲ್ ಒಕ್ಕೂಟದಲ್ಲಿ ನಡೆದಿರುವ ಹಗರಣವನ್ನು ಸಿಐಡಿ ತನಿಖೆಗೆ ಬೇಡ ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಿಬಿಐ ತನಿಖೆಗೆ ವಹಿಸಬೇಕು ಎಂದು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹಲವು ಸಂಘಟನೆಗಳು ಒತ್ತಾಯಿಸಿದ್ದವು.

ವರದಿ : ಗಿರೀಶ್ ರಾಜ್, ಮಂಡ್ಯ

ರೈತರಿಗೆ ಭರ್ಜರಿ ಗುಡ್ ನ್ಯೂಸ್ : ರೈತರಿಗಾಗಿಯೇ 'ಕೃಷಿ ಸಚಿವಾಲ'ಯ 'ಅಗ್ರಿಸ್ಟಾಕ್' ಡೇಟಾಬೇಸ್ ರಚನೆ, ಇದರ ಪ್ರಯೋಜನೆ ಎಷ್ಟು ಗೊತ್ತಾ.?



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top