ಕರ್ನಾಟಕ
BIG NEWS : ರಾಜ್ಯದಲ್ಲಿ ಮತ್ತೆ 10 ದಿನ 'ಕೊರೋನಾ ಕರ್ಪ್ಯೂ' ವಿಸ್ತರಣೆ.?
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ 2ನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕೊರೋನಾ ಕರ್ಪ್ಯೂ ಜಾರಿಗೊಳಿಸಿದೆ. ಮೇ.12ರವರೆಗೆ ರಾಜ್ಯ ಸರ್ಕಾರದಿಂದ ಕೊರೋನಾ ನಿಯಂತ್ರಣ ತಡೆಗಾಗಿ ಈ ಕ್ರಮ ಕೈಗೊಂಡಿದೆ. ಆದ್ರೇ.. ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ನಿಯಂತ್ರಣ ಆಗದೇ, ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಮತ್ತೆ 10 ದಿನಗಳ ಕಾಲ ರಾಜ್ಯ ಸರ್ಕಾರದಿಂದ ಕೊರೋನಾ ಕರ್ಪ್ಯೂ ವಿಸ್ತರಣೆ ಮಾಡಲಿದೆ ಎನ್ನಲಾಗುತ್ತಿದೆ. ಈ ಮೂಲಕ 14 ದಿನಗಳ ಕೊರೋನಾ ಕರ್ಪ್ಯೂ, ಮತ್ತೆ 10 ದಿನ ವಿಸ್ತರಣೆ ಆಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇಂದು ರಾಜ್ಯದಲ್ಲಿನ ಕೊರೋನಾ ಭೀಕರತೆ ಸೇರಿದಂತೆ ಆಕ್ಸಿಜನ್ ಹಾಹಾಕಾರದ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಂಜೆ 4 ಗಂಟೆಗೆ ಮಹತ್ವದ ತುರ್ತು ಸಚಿವ ಸಂಪುಟ ಸಭೆ ನಡೆಯಲಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೊರೋನಾ 2ನೇ ಅಲೆಯ ಕಂಟ್ರೋಲ್ ಸೇರಿದಂತೆ ಬೆಡ್ ಗಳ ಕೊರತೆ, ಆಕ್ಸಿಜನ್ ಸಕಾಲದಲ್ಲಿ ಸರಬರಾಜು ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಇದಲ್ಲದೇ.. ಮೇ.12ರಂದು ಮುಕ್ತಾಯಗೊಳ್ಳಲಿರುವಂತ ರಾಜ್ಯದಲ್ಲಿನ 14 ದಿನಗಳ ಕೊರೋನಾ ಕರ್ಪ್ಯೂ ಜಾರಿಯನ್ನು, ಮತ್ತೆ ವಿಸ್ತರಣೆ ಮಾಡುವ ಕುರಿತಂತೆ ಕೂಡ ಚರ್ಚೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಈ ಕುರಿತಂತೆ ಚಿಂತನೆ ಕೂಡ ನಡೆಸಿದ್ದು, ಈ ವಿಷಯವನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚಿಸಲಿದೆ ಎನ್ನಲಾಗಿದೆ. ಈ ಮೂಲಕ ರಾಜ್ಯದಲ್ಲಿ ಮೇ.12ರವರೆಗೆ ಜಾರಿಗೊಳಿಸಿರುವಂತ ಕೊರೋನಾ ಕರ್ಪ್ಯೂ ನಿಯಮವನ್ನು ಮತ್ತೆ 10 ದಿನಗಳ ಕಾಲ ವಿಸ್ತರಣೆ ಮಾಡಲಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.