Dailyhunt Logo
  • Light mode
    Follow system
    Dark mode
    • Play Story
    • App Story
BIG NEWS : ರಾಜ್ಯದ `ಗ್ರಾಮ ಪಂಚಾಯಿತಿಗಳು' ಸಾರ್ವಜನಿಕರಿಗೆ ಈ 30 ಮಾಹಿತಿಗಳನ್ನು ನೀಡುವುದು ಕಡ್ಡಾಯ.!

BIG NEWS : ರಾಜ್ಯದ `ಗ್ರಾಮ ಪಂಚಾಯಿತಿಗಳು' ಸಾರ್ವಜನಿಕರಿಗೆ ಈ 30 ಮಾಹಿತಿಗಳನ್ನು ನೀಡುವುದು ಕಡ್ಡಾಯ.!

Kannada News Now 1 week ago

ಬೆಂಗಳೂರು: ಗ್ರಾಮೀಣ ಭಾಗದ ಜನರಲ್ಲಿ ಪಾರದರ್ಶಕತೆ ಮತ್ತು ಆಡಳಿತದ ಮೇಲಿನ ನಂಬಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇನ್ಮುಂದೆ ಸಾರ್ವಜನಿಕರು ತಮ್ಮ ಗ್ರಾಮ ಪಂಚಾಯಿತಿಯಿಂದ ಒಟ್ಟು 30 ಪ್ರಮುಖ ಅಧಿಕೃತ ಮಾಹಿತಿಗಳನ್ನು ಪಡೆದುಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಗ್ರಾಮ ಪಂಚಾಯಿತಿಯಿಂದ ಈ ಕೆಳಕಂಡ ಮಾಹಿತಿಗಳನ್ನು ಸಾರ್ವಜನಿಕರಿಗೆ ಒದಗಿಸಬಹುದಾಗಿದೆ.

1. ಗ್ರಾಮ ಪಂಚಾಯಿತಿಗೆ ಬಿಡುಗಡೆಯಾದ ಅನುದಾನದ ವಿವರಗಳು.

2. ಗ್ರಾಮ ಪಂಚಾಯತ್ ವೆಚ್ಚ

3. ಗ್ರಾಮ ಪಂಚಾಯತಿ ಡಿ.ಸಿ.ಬಿ. ತಪ್ತ ವಿವರಗಳು (ಬೇಡಿಕೆ, ವಸೂಲಿ ಮತ್ತು ಬಾಕಿ)

4. ಮನೆ ಖಾತೆ ಉದ್ರತ ಭಾಗ, ಡಿಮ್ಯಾಂಡ್ ಉದೃತ ಭಾಗ, ಲೈಸೆನ್ಸ್, ಮ್ಯೂಟೇಶನ್ ಇತ್ಯಾದಿ ಪತ್ರಗಳು

5. ಗ್ರಾಮ ಪಂಚಾಯತಿ ಜಮಾ ಮತ್ತು ಖರ್ಚಿನ ವಿವರಗಳು (ನಮೂನೆ-9ರಲ್ಲಿ)

6. ಗ್ರಾಮ ಪಂಚಾಯತಿ ಸಾಮಾನ್ಯ ಸಭೆ ಹಾಗೂ ಸ್ಥಾಯಿ ಸಮಿತಿಗಳ ನಡವಳಿಗಳು

7. ಗ್ರಾಮ ಪಂಚಾಯತಿ ಸಭಾ ನಡವಳಿಗಳ ಮೇಲೆ ತೆಗೆದುಕೊಂಡ ಕ್ರಮಗಳು

8. ಗ್ರಾಮ ಸಭೆ ನಡವಳಿಗಳ ಮೇಲೆ ತೆಗೆದುಕೊಂಡ ಕ್ರಮಗಳು

9. ಗ್ರಾಮ ಪಂಚಾಯತಿ ಆಸ್ತಿಗಳ ವಿವರಗಳು

10. ಸಿಬ್ಬಂದಿ ವಿವರಗಳು

11. ಆಡಿಟ್ ವರದಿಗಳ ಮೇಲಿನ ಅನುಪಾಲನಾ ವರದಿ

12. ಗ್ರಾಮ ಪಂಚಾಯತಿ ಸ್ವತ್ತಿನ ಹರಾಜು, ಗುತ್ತಿಗೆ, ಮಾರಾಟ ಇತ್ಯಾದಿಗಳ ವಿವರಗಳು

13. ಕಾಮಗಾರಿಗಳ ಕ್ರಿಯಾ ಯೋಜನೆಗಳು (ಅಂದಾಜು ವೆಚ್ಚ, ಕಾಮಗಾರಿಗಳ ಸ್ಥಳ ವಿವರಗಳನ್ನೊಳಗೊಂಡಂತೆ)

14. ಗ್ರಾಮ ಪಂಚಾಯತಿ ಪ್ರಕಾರ್ಯಗಳ ಬಗ್ಗೆ ಮಾಹಿತಿ

15. ಗ್ರಾಮ ಪಂಚಾಯತಿ ದಾಸ್ತಾನು ನಿರ್ವಹಣೆ/ವಿತರಣೆ ವಿವರಗಳು
16. ಗ್ರಾಮ ಪಂಚಾಯತಿ ಲೆಕ್ಕ ಪತ್ರ ನಿಯಮಗಳ ವಿವರಗಳು (ವಿವಿಧ ಖರೀದಿ ನಿಯಮಗಳಿಗೆ ಅನುಸರಿಸಬೇಕಾದ ರೀತಿಗಳು ಸೇರಿದಂತೆ)

17. ಗ್ರಾಮ ಪಂಚಾಯಿತಿ ಮನೆ ಕಂದಾಯ, ನಿವೇಶನ ಶುಲ್ಕ, ನೀರಿನ ಕಂದಾಯ, ಸೆಸ್ ಇತ್ಯಾದಿಗಳನ್ನು ನಿರ್ಧರಿಸಿದ ವಿಧಿ ವಿಧಾನಗಳು

18. ಗ್ರಾಮ ಪಂಚಾಯತಿ ಕುಡಿಯುವ ನೀರು ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, ನೈರ್ಮಲೀಕರಣಕ್ಕೆ ಮಾಡಿದ ವೆಚ್ಚದ ವಿವರಗಳು

19. ವಿವಿಧ ಯೋಜನೆಗಳಡಿ ಆಯ್ಕೆಯಾದ ಪಲಾನುಭವಿಗಳ ಪಟ್ಟಿ

20. ಬಡತನ ರೇಖೆಗಿಂತ ಕೆಳಗಿರುವವರ ಪಟ್ಟಿ

21. ಗ್ರಾಮ ಪಂಚಾಯಿತಿ ಮೂಲ ಅಂಕಿ ಅಂಶಗಳ ವಿವರಗಳು

22. ವಾರ್ಷಿಕ ಆಡಳಿತ ವರದಿ

23. ಗ್ರಾಮ ಪಂಚಾಯತಿ ವತಿಯಿಂದ ಸಾಲ ಮಾಡಿದ ದೇಣಿಗೆ ಪಡೆದ ವಿವರಗಳು

24. ಗ್ರಾಮ ಪಂಚಾಯತ್ ಕುಲಾವರ ಬಾಕಿ ಪಟ್ಟಿ.

25. ಬಡತನ ರೇಖೆಗಿಂತ ಕೆಳಗಿರುವವರ ಪಟ್ಟಿ (ಬಿ.ಪಿ.ಎಲ್.ಪಟ್ಟಿ)

26. ಜನನ ಮರಣ ಮಾಹಿತಿ (ಗ್ರಾಮ ಪಂಚಾಯಿತಿ ವ್ಯಾಪ್ತಿಯೊಳಗೆ)

27. ಸರ್ಕಾರದಿಂದ ಬಂದ ವಿವಿಧ ಸುತ್ತೋಲೆಗಳು, ಆದೇಶ ಪ್ರತಿಗಳು

28. ಶೇ.18 ರ ಪ.ಜಾ/ಪ.ಪಂ.ಗಳ ಅಭಿವೃದ್ಧಿಗೆ ತೆಗೆದುಕೊಂಡ ಕಾರ್ಯಕ್ರಮಗಳ ಮಾಹಿತಿ

29. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳ ಮಾಹಿತಿ

30. ಗ್ರಾಮ ಪಂಚಾಯತಿ ಸದಸ್ಯರುಗಳ ವಿವರಗಳು

Dailyhunt
Disclaimer: This content has not been generated, created or edited by Dailyhunt. Publisher: Kannada News Now