Thursday, 28 Jan, 7.40 am Kannada News Now

ಹೋಮ್
BIG NEWS : ರೂಪಾಂತರಿ ಕೊರೊನಾಗೂ `ಕೋವ್ಯಾಕ್ಸಿನ್ʼ ಲಸಿಕೆ ಮದ್ದು : ಭಾರತ್ ಬಯೋಟೆಕ್

ಡಿಜಿಟಲ್‌ ಡೆಸ್ಕ್:‌ ಕೋವ್ಯಾಕ್ಸಿನ್ ಲಸಿಕೆ ಕೇವಲ ಕೊರೊನಾ ವೈರಸ್ ಮಾತ್ರ ಕೊರೊನಾದ ಹೊಸ ತಳಿ ಯುಕೆ ಕೊರೊನಾದಿಂದಲೂ ರಕ್ಷಿಸುತ್ತೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.

ಯುಎಸ್‌ ಔಷಧಿ ದೈತ್ಯ ಮಾಡರ್ನಾ ಈ ಹೇಳಿಕೆ ನೀಡಿದ ಕೆಲವು ದಿನಗಳ ನಂತರ, ಭಾರತ್ ಬಯೋಟೆಕ್ ಸಹ ಕೋವ್ಯಾಕ್ಸಿನ್‌ ಯುಕೆ ರೂಪಾಂತರ ಕೊರೊನಾ ವಿರುದ್ಧವೂ ಪರಿಣಾಮಕಾರಿ ಎಂದು ಹೇಳಿದೆ. ಅಂದ್ಹಾಗೆ, ಈ ವುಹಾನ್ ಕೊರೊನಾ ತಳಿಗಿಂತ ಯುಕೆ ಕೊರೊನಾಗೆ ಶೇ. 70 ಪ್ರತಿಶತ ಹೆಚ್ಚು ಸೋಂಕು ಹರಡುವ ಶಕ್ತಿಯಿದ್ದು, ಮಾರಣಾಂತಿಕವಾಗಿದೆ ಎಂದು ಹೇಳಿದೆ.

ಕೇಂದ್ರ ಸರ್ಕಾರದಿಂದ ದೇಶದ ರೈತರಿಗೆ ಮತ್ತೊಂದು ಗುಡ್‌ ನ್ಯೂಸ್‌: ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳ

'ಕೊವಾಕ್ಸಿನ್ ಸಾರ್ಸ್-ಕೊವಿ-2 ನ ಯುಕೆ ರೂಪಾಂತರಗಳನ್ನ ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ವೆ. ಇದು ಮ್ಯುಟೆಂಟ್ ವೈರಸ್ ತಪ್ಪಿಸಿಕೊಳ್ಳುವ ಸಾಧ್ಯತೆಯನ್ನ ಕಡಿಮೆ ಮಾಡುತ್ತದೆ' ಎಂದು ಮಂಗಳವಾರ ತನ್ನ ಸಂಶೋಧನಾ ಲೇಖನದ ಲಿಂಕ್ʼನೊಂದಿಗೆ ಭಾರತ್ ಬಯೋಟೆಕ್ ಟ್ವೀಟ್ ಮಾಡಿದೆ.

ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಈ ತಿಂಗಳ ಆರಂಭದಲ್ಲಿ ಭಾರತದ ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲ್ಪಟ್ಟ ಆಕ್ಸ್ ಫರ್ಡ್ ಕೋವಿಡ್-19 ಲಸಿಕೆ ಕೋವಿಶೀಲ್ಡ್ ಮತ್ತು ದೇಶದಲ್ಲಿ ನಿರ್ಬಂಧಿತ ತುರ್ತು ಬಳಕೆಗೆ ಭಾರತ ಬಯೋಟೆಕ್‌ʼನ ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಅನ್ನು ಅನುಮೋದಿಸಿತ್ತು.



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top