Kannada News Now

1.7M Followers

BIGG BREAKING NEWS: ಮುಂದಿನ ವಾರ 'ಸಪ್ಲಿಮೆಂಟರಿ ಬಜೆಟ್' ಮಂಡನೆ - ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ | Karnataka Budget 2022

18 Mar 2022.1:26 PM

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ನಂತ್ರ, ಆರ್ಥಿಕ ಸ್ಥಿತಿ ಸುಧಾರಿಸಿದ್ದು, ಇದಕ್ಕೆ ಅನುಗುಣವಾಗಿ ಸಂಪನ್ಮೂಲ ಕ್ರೂಢೀಕರಣವನ್ನು ಗಮನಿಸಿ, ಮುಂದಿನ ವಾರ ಹೆಚ್ಚುವರಿ ಬಜೆಟ್ ( Supplementary Budget ) ಮಂಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಘೋಷಿಸಿದ್ದಾರೆ.

ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ತೆರಿಗೆ ವಸೂಲಾತಿ ಗಣನೀಯವಾಗಿ ಹೆಚ್ಚಿದೆ. ಆಧಾಯದ ಪ್ರಮಾಣದಲ್ಲೂ ಏರಿಕೆಯಾಗಿದೆ. ಆದ್ದರಿಂದ ಈಗಾಗಲೇ ಘೋಷಿಸಿರುವ ಬಜೆಟ್ ಗಾತ್ರ ಕುಗ್ಗುವ ಭೀತಿ ಇಲ್ಲವಾಗಿದೆ. ಹೆಚ್ಚುವರಿ ಸಂಪ್ಮೂಲ ಕ್ರೂಢೀಕರಣದ ಮೊತ್ತವನ್ನು ಆಧರಿಸಿ, ಮುಂದಿನವಾರ ಸಪ್ಲಿಮೆಂಟರಿ ಬಜೆಟ್ ಮಂಡಿಸುವುದಾಗಿ ಘೋಷಿಸಿದರು.

ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ: ಈ ಬಗ್ಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದೇನು ಗೊತ್ತಾ.?

ಇಂದು ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿ ವಿಧಾನ ಪರಿಷತ್ ನಲ್ಲಿ ಮಾತನಾಡಿದಂತ ಅವರು, ಈ ಬಜೆಟ್ ( Karnataka Budget 2022 ) ನನಗೆ ಪರೀಕ್ಷೇಯ ರೂಪವಾಗಿ ಬಂದಿದೆ. ಕಳೆದ 2 ವರ್ಷದಲ್ದಿ ಹಣಕಾಸಿನ ಪರಿಸ್ಥಿತಿ ಯಾವ ರೀತಿ ಕುಗ್ಗಿದೆ. ಕೋವಿಡ್ ಕಾರಣದಿಂದ ಅಧಿಕ ಖರ್ಚು ಆಯ್ತು. ರೇವಿನ್ಯೂ ಡೆಫಿಸಿಟ್ ಇರುವ ಬಳುವಳಿ ನಾನು ಪಡೆದೆ. ಬಜೆಟ್ ಸೈಜ್ ಹೆಚ್ಚು ಮಾಡುವುದಿರಲಿ, ಶ್ರಿಂಕ್ ಆಗುತ್ತಾ ಎಂಬ ಆತಂಕ ಇತ್ತು. ಆದರೆ ಬಜೆಟ್ ಗಾತ್ರ ಹೆಚ್ಚು ಮಾಡುವುದರ ಜೊತೆಗೆ ಹಣಕಾಸಿನ ಸಂಗ್ರಹದ ಕಡೆ ಗಮನ ಹರಿಸಿದೆ ಎಂದರು.

ರಾಜ್ಯದ ಕಮರ್ಷಿಯಲ್ ಟ್ಯಾಕ್ಸ್, ಎಕ್ಸೈಸ್ ಡ್ಯೂಟಿ ಟಾರ್ಗೆಟ್ಗಿಂತ ಹೆಚ್ಚು ಸಂಗ್ರಹ ಆಗಿದೆ. ಹೀಗಾಗಿ ಮೊದಲ 6 ತಿಂಗಳ ರೇಟ್ ನಲ್ಲಿ ಹೋಗಿದ್ರೆ ಕೊರತೆ ಆಗ್ತಿದೆ. ಮುಂದಿನವಾರ ಸಪ್ಲಿಮೆಂಟ್ರಿ ಬಜೆಟ್ ಕೋಡ್ತೇನೆ. ಆಗ ವಿವರವಾಗಿ ಹೇಳ್ತಿನಿ ಎಂಬುದಾಗಿ ಘೋಷಿಸಿದರು.

BIG NEWS: ರಾಜ್ಯದಲ್ಲಿ ಖಾಲಿ ಇರುವ 'ಸರ್ಕಾರಿ ಹುದ್ದೆ'ಗಳು ಎಷ್ಟು ಗೊತ್ತಾ.? ಇಲ್ಲಿದೆ ಸಂಪೂರ್ಣ ಮಾಹಿತಿ

ಜಿಎಸ್ಟಿ ಕಾಂಪನ್ಸೆಷನ್ ಬಂತಿದ್ದರಿಂದ 9.5 ಗ್ರೋಥ್ ಬಜೆಟ್ ಮಂಡಿಸಿದ್ದೇನೆ. ಅಗ್ರಿಕಲ್ಚರ್ ಗ್ರೋಥ್ ಆದರೆ ಪ್ರೈಮರಿ, ಮ್ಯಾನುಫಾಕ್ಚರ್ ಗ್ರೋಥ್ ಆದ್ರೆ ಸರ್ವಿಸ್ ಸೆಕ್ಟರ್ ಗೆ ಅನುಕೂಲ ಆಗುತ್ತೆ. ರೈತರು ಉತ್ಪಾದಕರ ಜೊತೆಗೆ ಗ್ರಾಹಕರು ಕೂಡ. ಅವರು ಸಂಪಾದಿಸಿದ ಹಣ ಮತ್ತೆ ದಿನಬಳಕೆ ವಸ್ತು, ಟ್ರಾಕ್ಟರ್, ಡಿಸೇಲ್ ಮೇಲೆ ಖರ್ಚು ಮಾಡ್ತಾರೆ. ಒಂದಕ್ಕೊಂದು ಸಂಬಂಧ ಇರುವುದರಿಂದ ಹೆಚ್ಚಿನ ಗಮನ ಕೊಟ್ಟಿದ್ದೇವೆ ಎಂದರು.

ಫೈನಾನ್ಸ್ ಆಂಡ್ ಪೀಪಲ್ ಆಕ್ಟಿವಿಟಿ ಎರಡನ್ನು ಸರಿದೂಗಿಸಿಕೊಂಡು ಹೋದಾಗ ಎಲ್ಲ ಸರಿಯಾಗುತ್ತೆ. ಕೆಳಹಂತದಲ್ಲಿರುವ ಜನ ರೈತರು, ಕೂಲಿ ಕಾರ್ಮಿಕರು ಆರ್ಥಿಕ ಬೆಳವಣಿಗೆಯ ಕೆಲಸ ಮಾಡ್ತಾರೆ. ಅವರ ಬಗ್ಗೆ ಚಿಂತನೆ ಮಾಡ್ದಾಗ ಇನ್ನಷ್ಟು ಬೆಳವಣಿಗೆ ಆಗುತ್ತೆ ಎಂದು ತಿಳಿಸಿದರು.

BIG BREAKING NEWS: 200ಕ್ಕೂ ಹೆಚ್ಚು ಜನರಿಂದ ಬಾಂಗ್ಲಾದೇಶದ ಢಾಕಾದಲ್ಲಿ ಇಸ್ಕಾನ್ ರಾಧಾಕಾಂತ ದೇವಾಲಯ ಧ್ವಂಸ | ISKCON Radhakanta temple in Dhaka

ಬಂಡವಾಳ ಬೇಕು , ಆದರೆ ಇದನ್ನ ಎಲ್ಲವನ್ನು ಪರಿವರ್ತನೆ ಮಾಡುವವರನ್ನ ಮರೆಯಬಾರದು. ರಾಜ್ಯದ ಆರ್ಥಿಕ ಸ್ಥಿತಿ ಹಳಿಗೆ ತರುವ ಕೆಲಸ ಮಾಡಿದ್ದೇನೆ. ಕೋವಿಡ್ ಸಂದರ್ಭದಲ್ಲಿ 21 ಸಾವಿರ ಕೋಟಿ ರೇವಿನ್ಯೂ ರಿಸಿಟ್ ಕಡಿಮೆ ಆಯ್ತು. ಎಲ್ಲಾ ರಾಜ್ಯದಲ್ಲೂ ಇದು ಆಯ್ತು, 2022-23 ಬಜೆಟ್ ನಾನು ಮಂಡಿಸಿದ್ದೇನೆ. ನಾನು ಅಧಿಕಾರ ತೆಗೆದುಕೊಂಡ ತಕ್ಷಣ ಎಕಾನಮಿಕ್ಸ್ ಮಾಡ್ತೀನಿ. ಕೋವಿಡ್‍ನ ಎರಡನೆಯ , 3 ನೇ ಅಲೆಯ ಮಧ್ಯೆ ಸಮಯ ಇತ್ತು, ಹೀಗಾಗಿ ಆರ್ಥಿಕ ಬೆಳವಣಿಗೆ ಆಗುತ್ತೆ ಎಂಬ ಭರವಸೆ ಇತ್ತು. ಆದರೆ ಅದಕ್ಕೆ ಕಾಯದೆ ಕಾರ್ಮಿಕರ, ರೈತರಿಗೆ ಅನುಕೂಲ ಮಾಡಿಕೊಡಲು, ರೈತರ ಮಕ್ಕಳಿಗೆ ವಿದ್ಯಾನಿಧಿ ಕಾರ್ಯಕ್ರಮ ಮಾಡಿದೆ ಎಂದು ಹೇಳಿದರು.

ಜಮೀನು ಬಿಟ್ಟು ಬೇರೆ ಬೇರೆ ಕೆಲಸ ದಲ್ಲಿದ್ರೆ ಸ್ವಲ್ಪ ಅಭಿವೃದ್ಧಿ ಆಗಿದ್ದಾರೆ. ಕಕೇವ ಕೃಷಿ ಮಾಡಿದವರ ಮನೆಯಲ್ಲಿ ಅಭಿವೃದ್ಧಿ ಆಗಿಲ್ಲ ಎಂಬ ವಿಷಯ ಗೊತ್ತಾಯ್ತು. ಹೀಗಾಗಿ ರೈತ ಮಕ್ಕಳಿಗಾಗಿ ರೈತ ವಿದ್ಯಾನಿಧಿ ಕಾರ್ಯಕ್ರಮ ಮಾಡಿದೆ. ಇಲ್ಲಿಯವರೆಗೂ 6 ಲಕ್ಷ ವಿದ್ಯಾರ್ಥಿಗಳಿಗೆ ಕೊಟ್ಟಿದ್ದೇವೆ. ಹೆಣ್ಣುಮಕ್ಕಳನ್ನು ಸೇರಿಸಿದ್ದೇವೆ ಎಂದು ತಿಳಿಸಿದರು.

SHOCKING NEWS: 'ಸಿಲಿಕಾನ್ ಸಿಟಿ'ಯಲ್ಲಿ ಬೆಚ್ಚಿ ಬೀಳಿಸೋ ಪ್ರಕರಣ: 'ತಹಶೀಲ್ದಾರ್ ಪುತ್ರಿ' ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ.!

ಪಿಎಚ್ಡಿ ಕೇಂದ್ರ ಸರಿಪಡಿಸಲು ಕ್ರಮ ತೆಗೆದುಕೊಂಡಿದ್ದೇವೆ. ಸ್ಕಿಲ್ ಡೆವಲ್ಪಮೆಂಟ್ ನಲ್ಲಿ ತರಬೇತಿ ನೀಡ್ತಿದ್ದೇವೆ. 750 ಪಂಚಾಯಿತಿ ಅಭಿವೃದ್ಧಿ ಮಾಡಬೇಕು ಎಂಬ ನಿಟ್ಟಿನಲ್ಲಿ ಆಯ್ಕೆ ಮಾಡಿದ್ದೇವೆ. ಸ್ಟಾರ್ಟ್ ಅಪ್, ಕ್ರೀಡೆ, ನಗರೋತ್ದಾನ ದಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಿದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags