Wednesday, 16 Sep, 7.57 pm Kannada News Now

ಕರ್ನಾಟಕ
BIGG NEWS : 'ಡ್ರಗ್ಸ್ ದಂಧೆ' ಕೇಸ್ ನಲ್ಲಿ ರಾಜಕಾರಣಿಗಳ ಮಕ್ಕಳು-ಸಂಬಂಧಿಕರು : 'ED'ಯಿಂದ ಸ್ಪೋಟಕ ಮಾಹಿತಿ ಬಯಲು.!

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ತನಿಖೆ ಚುರುಕು ಮಾಡಿದ್ದಾರೆ. ಮಾದಕ ಜಾಲದಲ್ಲಿ ಶಾಮೀಲಾದವರನ್ನು ಹೆಡೆಮುರಿ ಕಟ್ಟಲು ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.

ಯೆಸ್, ಡ್ರಗ್ಸ್ ಪ್ರಕರಣದಲ್ಲಿ ರಾಜಕಾರಣಿಗಳ ಪುತ್ರರು ಹಾಗೂ ಸಂಬಂಧಿಕರು ಭಾಗಿಯಾಗಿದ್ದು, ಅವರನ್ನು ಪತ್ತೆ ಮಾಡಿ ಅವರ ಹಿನ್ನೆಲೆಯನ್ನು ಪರಿಶೀಲಿಸಲು ಇಡಿ ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ.

ಈ ನಿಟ್ಟಿನಲ್ಲಿ ಒಟ್ಟು 7 ಮಂದಿಯ ಪಟ್ಟಿಯನ್ನು ಇಡಿ ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ. ರಾಜ್ಯದ ಮೂರು ಪಕ್ಷದ ರಾಜಕಾರಣಿಗಳ ಮಕ್ಕಳು ಮತ್ತು ಸಂಬಂಧಿಕರ ಹೆಸರಿರುವ ಲಿಸ್ಟ್ ಸಿದ್ದಪಡಿಸಿದ್ದು, ಸದ್ಯದಲ್ಲೇ ಪಟ್ಟಿ ಕೋರ್ಟ್ ನಲ್ಲಿ ಬಯಲಾಗಿದೆ. ಇದರಿಂದ ಡ್ರಗ್ಸ್ ದಂಧೆಯಲ್ಲಿ ಭಾಗಿಯಾದ ಹಲವು ರಾಜಕಾರಣಿಗಳ ಮುಖವಾಡ ಕಳಚಿ ಬೀಳಲಿದೆ ಎನ್ನಲಾಗಿದೆ.

ಜೈಲಿಗೆ ಹೋದ್ರೂ 'ಸಂಜನಾ ಗರ್ಲಾನಿ' ಹೈಡ್ರಾಮಾ : ಪೊಲೀಸರ ಜೊತೆ 'ಗಂಡ-ಹೆಂಡ್ತಿ' ಬೆಡಗಿಯ ಕಿರಿಕ್..!

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top