Kannada News Now

1.7M Followers

BIGG NEWS: ಜುಲೈ ಅಂತ್ಯದೊಳಗೆ 15,000 ಶಾಲಾ ಶಿಕ್ಷಕರ ನೇಮಕಾತಿ ಆಯ್ಕೆ ಪಟ್ಟಿ ಪ್ರಕಟ - ಸಚಿವ ಬಿ.ಸಿ ನಾಗೇಶ್

04 Jul 2022.06:29 AM

ಬೆಂಗಳೂರು: 15,000 ಶಾಲಾ ಶಿಕ್ಷಕರ ನೇಮಕಾತಿ ( Teacher Recruitment 2022 ) ಸಂಬಂಧ ನಡೆದಂತ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶವನ್ನು ಜುಲೈ ಅಂತ್ಯದೊಳಗೆ ಪ್ರಕಟಿಸಲಾಗುತ್ತದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

'ಮಿಸ್ ಇಂಡಿಯಾ 2022' ಕಿರೀಟ ಮುಡಿಗೇರಿಸಿಕೊಂಡ 'ಕರ್ನಾಟಕದ ಸಿನಿ ಶೆಟ್ಟಿ' | Miss India 2022

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, 15 ಸಾವಿರ ಶಿಕ್ಷಕರ ಪರೀಕ್ಷೆಯ ನಂತ್ರ ಮೌಲ್ಯ ಮಾಪನ ಕಾರ್ಯ ನಡೆಯುತ್ತಿದೆ. ಎರಡು ಪತ್ರಿಕೆಯ ಮೌಲ್ಯಮಾಪನ ಮುಗಿದಿದ್ದು, ಜುಲೈ ಕೊನೆಯ ವಾರ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳಲಿದೆ. ಶೇಕಡಾವಾರು ಅಂಕಗಳನ್ನು ಪರಿಗಣಿಸಿ ಆಯ್ಕೆ ಪಟ್ಟಿಯನ್ನು ಜುಲೈ ಅಂತ್ಯದ ವೇಳೆಗೆ ಪ್ರಕಟಿಸಲಾಗುತ್ತದೆ ಎಂದರು.

BIG NEWS: ಕಾನೂನಿನ ನಿಯಮವನ್ನು ಕಾಪಾಡಲು ಸಾಮಾಜಿಕ ಮಾಧ್ಯಮಕ್ಕೆ ಲಗಾಮು ಹಾಕಿ - ನ್ಯಾ.ಪರ್ದೀವಾಲಾ ಆಗ್ರಹ

ಅಂದಹಾಗೇ 15 ಸಾವಿರ ಶಿಕ್ಷಕರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೇ.21 ಮತ್ತು 22ರಂದು ನಡೆದಿತ್ತು. ಈ ಹುದ್ದಗಳಿಗೆ 10,6,083 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರು.Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags