Kannada News Now

1.7M Followers

BIGG NEWS : ಕರ್ತವ್ಯನಿರತ ಚಾಲಕ ವಿಶ್ರಾಂತಿಯಲ್ಲಿ ಮೃತಪಟ್ಟರೂ ವಿಮೆ : ಹೈಕೋರ್ಟ್ ಮಹತ್ವದ ಆದೇಶ

25 Sep 2022.06:32 AM

ಬೆಂಗಳೂರು : ಕರ್ತವ್ಯದ್ದಲಿದ್ದಾಗ ಚಾಲಕ ಹೃದಯಾಘಾತ ಸಂಭವಿಸಿ ಮೃತಪಟ್ಟರೆ ಮೃತ ಚಾಲಕನ ಕುಟುಂಬಕ್ಕೆ ವಿಮಾ ಪರಿಹಾರ ನೀಡಬೇಕೆಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

BIG NEWS : ಭಾರತದಲ್ಲಿ 5G ಸೇವೆಗೆ ಅ. 1ರಂದು ಪ್ರಧಾನಿ ಮೋದಿ ಚಾಲನೆ | 5G services

ಕರ್ತವ್ಯದಲಿದ್ದಾಗ ಲಾರಿಯನ್ನು ನಿಲ್ಲಿಸಿ ನಿದ್ರಿಸುತ್ತಿದ್ದಾಗ ಹೃದಯಾಘಾತ ಸಂಭವಿಸಿ ಚಾಲಕ ಸಾವನ್ನಪ್ಪಿದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಚ್. ಪಿ. ಸಂದೇಶ್ ಅವರ ನ್ಯಾಯಪೀಠ, ಕರ್ತವ್ಯದ ಸಮಯದಲ್ಲಿ ಚಾಲಕ ಸಾವನ್ನಪ್ಪಿದ್ದಾನೆ. ಅದನ್ನು ಉದ್ಯೋಗ ಮಾಡುವ ವೇಳೆ ಸಂಭವಿಸಿದ ಸಾವು ಎಂದು ಪರಿಗಣಿಸಿ ಚಾಲಕನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಹೇಳಿದೆ.

BIGG NEWS : ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ : MBBS, ಡೆಂಟಲ್ ಕೋರ್ಸ್ ಶುಲ್ಕ ಶೇ.10ರಷ್ಟು ಏರಿಕೆ

2008 ರಲ್ಲಿ ಬಾಲಕೋಟೆಯ ಬಾದಾಮಿ ತಾಲೂಕಿನ ನಿವಾಸಿ ಈರಣ್ಣ ಎಂಬುವರು ಲಾರಿ ನಿಲುಗಡೆ ಮಾಡಿ ವಿಶ್ರಾಂತಿ ಪಡೆಯುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದರು. ಆದರೆ ಚಾಲಕ ವಾಹನ ನಿಲುಗಡೆ ಮಾಡಿ ನಿದ್ರೆ ಮಾಡುತ್ತಿದ್ದ ವೇಳೆ ಸಾವನ್ನಪ್ಪಿದ್ದಾನೆ. ಲಾರಿ ಓಡಿಸುವಾಗ ಅಪಘಾತ ಉಂಟಾಗಿ ಚಾಲಕ ಮೃತಪಟ್ಟಿಲ್ಲ ಹೀಗಾಗಿ ಪರಿಹಾರ ನೀಡುವಂತೆ ಕಾರ್ಮಿಕ ಆಯುಕ್ತರ ಆದೇಶ ಕಾನೂನು ಬಾಹಿರವಾಗಿದೆ ಎಂಬ ವಿಮಾ ಕಂಪನಿಯ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.

BIGG NEWS : ವಿಪಕ್ಷ ನಾಯಕ ಸಿದ್ದರಾಮಯ್ಯ ಹತ್ಯೆಗೆ ನಡೆದಿತ್ತು ಸ್ಕೆಚ್ : ನಿಡುಮಾಮಿಡಿ ಮಠದ ಸ್ವಾಮೀಜಿ ಸ್ಪೋಟಕ ಹೇಳಿಕೆDisclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags