Thursday, 16 Sep, 9.06 pm Kannada News Now

ಹೋಮ್
BIGG NEWS : ನಾಳೆ ರಾಜ್ಯಾಧ್ಯಂತ 'ಬೃಹತ್ ಲಸಿಕಾ ಮೇಳ' : ಲಸಿಕೆ ಪಡೆಯೋ ನಿರೀಕ್ಷೆಯಲ್ಲಿದ್ದರೇ ಲಸಿಕಾ ಕೇಂದ್ರಕ್ಕೆ ಹೋಗೋದು ಮರಿಬೇಡಿ.!

ಬೆಂಗಳೂರು : ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 4.8 ಕೋಟಿ ಕೋವಿಡ್ ಲಸಿಕಾ ಡೋಸ್ ನೀಡಲಾಗಿದೆ. ಲಸಿಕಾಕರಣವನ್ನು ಮತ್ತಷ್ಟು ಚುರುಕುಗೊಳಿಸೋ ನಿಟ್ಟಿನಲ್ಲಿ, ನಾಳೆ ರಾಜ್ಯಾಧ್ಯಂತ ಬೃಹತ್ ಲಸಿಕಾ ಮೇಳವನ್ನು ( Bruhath Covid19 Vaccine Mela ) ಹಮ್ಮಿಕೊಳ್ಳಲಾಗಿದೆ.

ಶಿಕ್ಷಕರ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಶೀಘ್ರವೇ 1,801 ಸಹ ಶಿಕ್ಷಕರ ನೇಮಕ - ಸಚಿವ ಬಿ.ಸಿ.ನಾಗೇಶ್

ಹೌದು.. ನಾಳೆ ರಾಜ್ಯಾಧ್ಯಂತ ಬೃಹತ್ ಲಸಿಕಾ ಮೇಳವನ್ನು ಆಯೋಜಿಸಲಾಗಿದೆ. ದಿನಾಂಕ 17-09-2021ರಂದು ಹಮ್ಮಿಕೊಂಡಿರುವಂತ ಬೃಹತ್ ಲಸಿಕಾ ಮೇಳಕ್ಕಾಗಿ ಜಿಲ್ಲೆಗಳಿಗೆ 34 ಲಕ್ಷ ಕೋವಿಡ್-19 ಲಸಿಕಾ ಡೋಸ್ ಗಳನ್ನು ಸರಬರಾಜು ಮಾಡಲಾಗಿದೆ.

ರಸ್ತೆ ಆಗೋವರೆಗೆ ಮದುವೆಯಾಗೋಲ್ಲವೆಂದ ಹುಡುಗಿಯ ಹಠಕ್ಕೆ ಮಣಿದ ಜಿಲ್ಲಾಡಳಿತ : ರಸ್ತೆನೂ ಮಾಡ್ತೀವಿ, ಮದುವೆನೂ ಮಾಡ್ತೀವಿ ಅಂದ ಡಿಸಿ

ಈಗಾಗಲೇ ಎಲ್ಲಾ ಜಿಲ್ಲೆಗಳ ಕಟ್ಟ ಕಡೆಯ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಕ್ಕೆ ಲಸಿಕೆ ತಲುಪಿಸೋ ಕಾರ್ಯ ಭರದಿಂದ ಸಾಗಿದ್ದು, ಲಸಿಕೆ ಪಡೆಯಬೇಕಾದ ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ಜಿಲ್ಲೆಗಳಿಗೆ ಗುರಿಯನ್ನು ನಿಗಧಿಪಡಿಸಲಾಗಿದೆ. ಜೊತೆಗೆ ಆದ್ಯತೆ ಗುಂಪುಗಳಿಗೆ ವಿಶೇಷ ಒತ್ತು ಕೂಡ ನೀಡಲಾಗಿದೆ.

ರಾಜ್ಯದ 56 ಮುನ್ಸಿಪಾಲ್ಟಿಗಳಿಗೆ ಮೀಸಲಾತಿ ಪ್ರಕಟಿಸಿ : ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಜಿಲ್ಲಾ ಮಟ್ಟದ ವೈದ್ಯಕೀಯ ವಿದ್ಯಾಲಯಗಳು, ನರ್ಸಿಂಗ್ ಶಾಲೆಗಳು ಮತ್ತು ಖಾಸಗಿ ಕೋವಿಡ್-19 ಲಸಿಕಾ ಕೇಂದ್ರಗಳ ಬೆಂಬಲ ಪಡೆಯಲಾಗುತ್ತಿದೆ. ಇತರೆ ಎಲ್ಲಾ ಇಲಾಖೆಗಳು ಬೃಹತ್ ಲಸಿಕಾ ಮೇಳದಲ್ಲಿ ( Corona Vaccine ) ಸಕ್ರಿಯವಾಗಿ ಭಾಗವಹಿಸಿ, ಸಹಕಾರ ನೀಡುವಂತೆ ಆರೋಗ್ಯ ಇಲಾಖೆ ಕೋರಿದೆ.

Corona Vaccine : ಇದುವರೆಗೆ ಭಾರತದಲ್ಲಿ ಮೊದಲ ಡೋಸ್, 2ನೇ ಡೋಸ್ ಲಸಿಕೆ ಪಡೆದವರೆಷ್ಟು ಗೊತ್ತಾ.?

ಅಂದಹಾಗೇ ದಿನಾಂಕ 17-09-2021ರ ಬೃಹತ್ ಲಸಿಕಾ ಮೇಳಕ್ಕೆ 12,700 ಸರ್ಕಾರಿ ಕೋವಿಡ್-19 ಲಸಿಕಾ ಕೇಂದ್ರಗಳು, 300 ಖಾಸಗಿ ಕೋವಿಡ್-19 ಲಸಿಕಾ ಕೇಂದ್ರಗಳು ಹಾಗೂ 14,666 ಲಸಿಕಾ ಸತ್ರಗಳು ಕಾರ್ಯಪ್ರವೃತ್ತವಾಗಲಿವೆ.



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top