Kannada News Now
1.8M Followersಬೆಂಗಳೂರು : 'ರಾಜ್ಯ ಸರ್ಕಾರಿ ನೌಕರ'ರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಪುಣ್ಯಕೋಟಿ ದತ್ತು ಯೋಜನೆ ದೇಣಿಗೆಗೆ 'ಆದಾಯ ತೆರಿಗೆ' ವಿನಾಯ್ತಿ ಘೋಷಿಸಿ ಆದೇಶ ಹೊರಡಿಸಿದೆ.
ಈ ಕುರಿತು ಬಿ.ಎನ್ ಪ್ರವೀಣ್ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರಿ ನೌಕರರ ವೇತನದಿಂದ ಕಟಾವು ಮಾಡಲಾದ ವಂತಿಗೆ ಮೊತ್ತಕ್ಕೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಹೊಂದಿರುವ ಆದಾಯ ತೆರಿಗೆ ವಿನಾಯಿತಿ ಅನ್ವಯ ಕ್ರಮಕೈಗೊಂಡು ಆದಾಯ ತೆರಿಗೆ ಅಧಿನಿಯಮ, 1961ರ ಕಲಂ 80(ಜಿ) ವಿನಾಯಿತಿ ನೀಡಿ ಆದೇಶ ಹೊರಡಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಕೋರಿದ್ದರ ಹಿನ್ನಲೆಯಲ್ಲಿ ಈ ಬಗ್ಗೆ ಸೂಕ್ತ ಹೊರಡಿಸುವ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಮುಂದಿನ ಕ್ರಮವಹಿಸುವಂತೆ ಕೋರಿರುತ್ತದೆ.
ಅದಂತೆ ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 80G ರನ್ವಯ ತೆರಿಗೆ ವಿನಾಯಿತಿ ಇದ್ದು, ಅದರಂತೆ ಮಣ್ಯಕೋಟಿ ದತ್ತು ಯೋಜನೆಗೆ ವಂತಿಗೆಯನ್ನು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಗೆ ನೀಡಿದ ಅಧಿಕಾರಿ/ನೌಕರರು ಸೆಕ್ಷನ್ 80G ರನ್ವಯ ವಿನಾಯಿತಿ ಪಡೆಯಬಹುದಾಗಿರುತ್ತದೆ ಎಂದು ಆದೇಶ ಹೊರಡಿಸಿದ್ದಾರೆ.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now