Kannada News Now
1.8M Followersಬೆಂಗಳೂರು : ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ದಿನಕ್ಕೆ ಮೂರು ಬಾರಿ 10 ನಿಮಿಷ ವಿರಾಮ ನೀಡುವ 'ವಾಟರ್ ಬೆಲ್' ಯೋಜನೆ ಮರು ಜಾರಿಗೆ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಈ ಬಗ್ಗೆ ಸರ್ಕಾರ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದ್ದು, ಬೆಲ್ ಹೊಡೆದ ವೇಳೆ ಮಕ್ಕಳಿಗೆ ನೀರು ಕುಡಿಯಲು ಸೂಚಿಸಿಬೇಕೆಂಬುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಬೆಳಗ್ಗೆ 10;35 ಕ್ಕೆ ಹಾಗೂ ಮಧ್ಯಾಹ್ನ 12 ಗಂಟೆ, ಹಾಗೂ 2 ಗಂಟೆಗೆ ವಾಟಲ್ ಬೆಲ್ ಮಾಡಲು ಚಿಂತನೆ ನಡೆಸಿದೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ನೀರು ಬಹಳ ಮುಖ್ಯವಾಗಿದ್ದು, ಆದ್ದರಿಂದ ಮಕ್ಕಳಿಗೆ ನೀರು ಕುಡಿಯಲು ದಿನಕ್ಕೆ ಮೂರು ಬಾರಿ 10 ನಿಮಿಷ ಬ್ರೇಕ್ ನೀಡಲು ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ಮಕ್ಕಳೂ ಸಾಮಾನ್ಯವಾಗಿ ಶಾಲೆಗೆ ವಾಟರ್ ಬಾಟಲ್ ತೆಗೆದುಕೊಂಡು ಹೋಗುತ್ತಾರೆ. ಆದರೆ, ಸಮರ್ಪಕವಾಗಿ ನೀರು ಕುಡಿಯುತ್ತಾರೆಯೇ..? ಈ ಪ್ರಶ್ನೆಗೆ ಬಹುತೇಕ ಪೋಷಕರಲ್ಲಿ ತೃಪ್ತಿಕರ ಪ್ರತಿಕ್ರಿಯೆ ಇಲ್ಲ. ಶಾಲೆಗಳಲ್ಲಿ ಮಕ್ಕಳು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುತ್ತಿಲ್ಲಎಂಬುದನ್ನು ಮನಗಂಡ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ರಾಜ್ಯದ ಎಲ್ಲಶಾಲೆಗಳಲ್ಲಿಯೂ ಕೇರಳ ಮಾದರಿಯಲ್ಲಿವಾಟರ್ ಬೆಲ್ ಯೋಜನೆ ಮರು ಜಾರಿಗೊಳಿಸುವ ಕುರಿತು ಚಿಂತನೆ ನಡೆಸಿದ್ದಾರೆ.
ಮಕ್ಕಳ ವಿಶೇಷ ಗ್ರಾಮ ಸಭೆ ನಡೆಸಲು ಸೂಚಿಸಿ ರಾಜ್ಯ ಸರ್ಕಾರ ಆದೇಶ
ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನದ ಸಂಬಂಧ ಒಂದು ದಿನ 'ಮಕ್ಕಳ ವಿಶೇಷ ಗ್ರಾಮ ಸಭೆ ನಡೆಸಲು ಸೂಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, 2022ನೇ ಸಾಲಿನಲ್ಲಿ ಮಕ್ಕಳ ಅಭಿವೃದ್ಧಿಯ ಅಂಶಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ' ಮಕ್ಕಳ ಸ್ನೇಹಿ ಮತ್ತು ಮಕ್ಕಳ ಸುರಕ್ಷಿತ' ಪಂಚಾಯಿತಿಗಳನ್ನಾಗಿಸಲು ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನವನ್ನು ಹಾಗೂ 01 ದಿನ ಮಕ್ಕಳ ಗ್ರಾಮ ಸಭೆಯನ್ನು ನಡೆಸಲು ಸುತ್ತೋಲೆಯನ್ನುಹೊರಡಿಸಲಾಗಿದೆ.
ಸದರಿ ಸುತ್ತೋಲೆಯಲ್ಲಿ ತಿಳಿಸಿರುವಂತೆ 'ಸ್ಥಳೀಯ ಸಮುದಾಯ, ಗ್ರಾಮಸ್ಥರು ಮತ್ತು ಅಧಿಕಾರೇತರರ ಸಹಕಾರದೊಂದಿಗೆ ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಹಾಗೂ ಈ ಅಧೀನ ಕಛೇರಿ ವ್ಯಾಪ್ತಿಗೆ ಬರುವ ಎಲ್ಲಾ ಅಧಿಕಾರಿಗಳು, ಮುಖ್ಯಶಿಕ್ಷಕರುಗಳು ಕೋವಿಡ್ ಸುರಕ್ಷತಾ ಕ್ರಮವನ್ನು.. ಅನುಸರಿಸಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ದಿನಾಂಕ:14.11.2022ರಿಂದ ದಿನಾಂಕ:24.01.2023ರ ವರಗೆ ನಡೆಯಲಿರುವ 'ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ'ದಲ್ಲಿ ಭಾಗವಹಿಸಿ, ಇದರೊಂದಿಗೆ ನೀಡಲಾಗಿರುವ ಕಾರ್ಯ ಚಟುವಟಿಕೆಗಳ ವೇಳಾ ಪಟ್ಟಿಯಂತ ಕಾರ್ಯಕ್ರಮವನ್ನುಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ನೆರವು ಸಹಕಾರವನ್ನು ನೀಡಲು ಸೂಚಿಸಿದ್ದಾರೆ.
BIGG NEWS : ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ 'ಮಕ್ಕಳ ಗ್ರಾಮ ಸಭೆ' ನಡೆಸಲು ಸೂಚಿಸಿ ರಾಜ್ಯ ಸರ್ಕಾರ ಆದೇಶ
'ಮುರುಘಾ ಶ್ರೀ'ಗಳ ಪೋಕ್ಸೋ ಪ್ರಕರಣ : ಸಂತ್ರಸ್ತ ಬಾಲಕಿಗೆ ಕುಮ್ಮಕ್ಕು ನೀಡಿದ ಆರೋಪಿ ಶಿಕ್ಷಕ ಅರೆಸ್ಟ್
Disclaimer
This story is auto-aggregated by a computer program and has not been created or edited by Dailyhunt Publisher: Kannada News Now