ಚೆನ್ನೈ : ತಿರುಪತಿ ಕ್ಷೇತ್ರದ ಸಂಸದ ಬಲ್ಲಿ ದುರ್ಗಾ ಪ್ರಸಾದ್ ರಾವ್ ಅವರು ಚೆನ್ನೈನ ಅಪೊಲೊ ಆಸ್ಪತ್ರೆಗಳಲ್ಲಿ ಇಂದು (ಬುಧವಾರ) ಸಂಜೆ ನಿಧನರಾಗಿದ್ದಾರೆ.
ಕಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಉತ್ತಮ ಚಿಕಿತ್ಸೆಗಾಗಿ ಚೆನ್ನೈನ ಅಪೊಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಖಚಿತಪಡಿಸಿದ್ದಾರೆ.
ಮೃತ ಬಲ್ಲಿ ದುರ್ಗಾ ಪ್ರಸಾದ್ ಮಾಜಿ ಸಚಿವ ಎನ್.ಶ್ರೀನಿವಾಸುಲು ರೆಡ್ಡಿ ಅವರ ಅನುಯಾಯಿಯಾಗಿದ್ದರು. ಹಾಗೂ ಜನಪ್ರಿಯ ನಟ ಹಾಗೂ ರಾಜಕಾರಣಿ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ದಿವಂಗತ ಎನ್.ಟಿ. ರಾಮಾರಾವ್ ಅವರ ಸಂಪುಟದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದರು.
BIGG NEWS : 'ಡ್ರಗ್ಸ್ ದಂಧೆ' ಕೇಸ್ ನಲ್ಲಿ ರಾಜಕಾರಣಿಗಳ ಮಕ್ಕಳು-ಸಂಬಂಧಿಕರು : 'ED'ಯಿಂದ ಸ್ಪೋಟಕ ಮಾಹಿತಿ ಬಯಲು.!

