Kannada News Now

1.7M Followers

BIGG NEWS: ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ' ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆ'ಗಳಿಗೆ 'ಮೌಖಿಕ ಪರೀಕ್ಷೆ' ರದ್ದು

20 Jan 2022.7:53 PM

ಬೆಂಗಳೂರು: ರಾಜ್ಯ ಸರ್ಕಾರ ಈಗಾಗಲೇ ಗ್ರೂಪ್-ಸಿ ವೃಂದದ ಹುದ್ದೆಗಳಿಗೆ ಮೌಖಿಕ ಪರೀಕ್ಷೆಯನ್ನು ಕೈಬಿಡಲಾಗಿದೆ. ಈ ನಿಯಮ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೂ ಅನ್ವಯಿಸಲಿದೆ. ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆಗಳಿಗೆ ನಿಗದಿ ಪಡಿಸಲಾಗಿದ್ದಂತ ಮೌಖಿಕ ಪರೀಕ್ಷೆಯನ್ನು ಕೈಬಿಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

BIGG NEWS: 'ಕೊರೋನಾ ಸೋಂಕಿತ'ರಿಗೆ ಬಿಗ್ ಶಾಕ್: ಇನ್ಮುಂದೆ 'ಖಾಸಗಿ ಆಸ್ಪತ್ರೆ'ಗೆ ಚಿಕಿತ್ಸೆಗಾಗಿ ದಾಖಲಾದ್ರೇ.. ಸರ್ಕಾರದ ಪರಿಹಾರ ಸಿಗಲ್ಲ

ಈ ಬಗ್ಗೆ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದು, ದಿನಾಂಕ 01-07-2019ರ ಕರ್ನಾಟಕ ನಾಗರೀಕ ಸೇವೆಗಳ ನೇಮಕಾತಿ ತಿದ್ದುಪಡಿ ನಿಯಮಗಳನುಸಾರ, ಗ್ರೂಪ್-ಸಿ ಹುದ್ದೆಗಳಿಗೆ ಮೌಖಿಕ ಪರೀಕ್ಷೆಯನ್ನು ಕೈ ಬಿಡಲಾಗಿದೆ ಎಂದು ತಿಳಿಸಿದ್ದಾರೆ.

BIG NEWS: 'ಜೆಡಿಎಸ್' ಮತ್ತೊಂದು ವಿಕೆಟ್ ಪತನ: ನಾಳೆ ತೆನೆ ಬಿಟ್ಟು ಕೈ ಹಿಡಿಯಲಿರುವ 'ಮಾಜಿ ಪರಿಷತ್ ಸದಸ್ಯ'

ರಾಜ್ಯ ಸರ್ಕಾರ ನೇಮಕಾತಿ ತಿದ್ದುಪಡಿ ನಿಯಮಗಳ ಅನುಸಾರವಾಗಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿನ ಅಗ್ನಿ ಶಾಮಕ ಠಾಣಾಧಿಕಾರಿ ಹುದ್ದೆಗಳು ಈ ನಿಯಮದಡಿಯಲ್ಲಿ ಬರಲಿವೆ. ಈ ಗ್ರೂಪ್-ಸಿ ವೃಂದದ ಹುದ್ದೆಗಳ ನೇರ ನೇಮಕಾತಿಗಳಿಗೆ ಮೌಖಿಕ ಪರೀಕ್ಷೆ ನಿಯಮ ಕೈಬಿಡುವುದನ್ನು ಅಳವಡಿಸಿಕೊಳ್ಳುವಂತೆ ನಿರ್ದೇಶಿಸಿದ್ದಾರೆ.

BIGG BREAKING NEWS: 'SSLC ಪೂರ್ವಸಿದ್ಧತಾ ಪರೀಕ್ಷೆ'ಯ ವೇಳಾಪಟ್ಟಿ ಪ್ರಕಟ: ಹೀಗಿದೆ ಫೆ.21ರ ಆರಂಭವಾಗುವ ಪರೀಕ್ಷಾ ವೇಳಾಪಟ್ಟಿ | SSLC Preparatory Exam

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags