Kannada News Now

1.7M Followers

BIGG NEWS : ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ| Transfer of teachers

23 Jan 2023.06:23 AM

ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಶಿಕ್ಷಕರ ವರ್ಗಾವಣೆ ಸಂಬಂಧ ಮರುಹಂಚಿಕೆ ಕೌನ್ಸೆಲಿಂಗ್ ಗೆ ಅರ್ಹರಾಗಿರುವ ಹೆಚ್ಚುವರಿ ಶಿಕ್ಷಕರ ಜೇಷ್ಠತಾ ಪಟ್ಟಿ ಇಂದು ಪ್ರಕಟವಾಗಲಿದೆ.

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ಮರು ಹೊಂದಾಣಿಕೆ ಕೌನ್ಸೆಲಿಂಗ್ ಬ್ಲಾಕ್ ಹಂತದಲ್ಲಿ ನಾಳೆಯಿಂದ ನಡೆಯಲಿದ್ದು, ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿ ತಾಂತ್ರಿಕ ಸಮಸ್ಯೆಗಳ್ನು ಪರಿಹರಿಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಶಿಕ್ಷಣ ಇಲಾಖೆಯು ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ.

ರಾಜ್ಯದಲ್ಲಿ 10,500 ಹೆಚ್ಚುವರಿ ಶಿಕ್ಷಕರನ್ನು ವಿಷಯವಾರು ಗುರುತಿಸಲಾಗಿದ್ದು, ಅವರಿಗೆ ಕೌನ್ಸೆಲಿಂಗ್ ನಡೆಸಿ ತಾಲೂಕಿನೊಳಗೆಯೇ ವರ್ಗಾವಣೆ ಮಾಡುವುದಾಗಿ ಶಿಕ್ಷಣ ಇಲಾಖೆ ತಿಳಿಸಿದ್ದು, ಇಂದು ಜೇಷ್ಠತಾ ಪಟ್ಟಿ ಪ್ರಕಟಿಸಿದ ನಂತರ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಜ. 30 ರಂದು ಜಿಲ್ಲಾ ಹಂತದಲ್ಲಿ ಮರು ಹೊಂದಾಣಿಕೆ ಪ್ರಕ್ರಿಯೆ ನಡೆಯಲಿದೆ. ಫೆ. 9 ರಿಂದ ಜಿಲ್ಲಾ ಹಂತದಲ್‌ಇ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

BIGG NEWS : ಈ ಬಾರಿಯ 'ಗಣರಾಜ್ಯೋತ್ಸವದಲ್ಲಿ 'ಕರ್ನಾಟಕ ಟ್ಯಾಬ್ಲೋ' ಸೇರಿ '23 ಸ್ತಬ್ಧ ಚಿತ್ರ'ಗಳ ಪ್ರದರ್ಶನ : ರಕ್ಷಣಾ ಸಚಿವಾಲಯ ಮಾಹಿತಿ


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags