Thursday, 04 Mar, 8.42 am Kannada News Now

ಭಾರತ
BIGGNEWS: ಕಾಶ್ಮೀರಿ ವಿದ್ಯಾರ್ಥಿಗಳಿಗೆ ಎಂಬಿಬಿಎಸ್, ಎಂಜಿನಿಯರಿಂಗ್ 'ವಿದ್ಯಾರ್ಥಿ ವೇತನ' ನೀಡಲು ಮುಂದಾದ ಪಾಕ್‌

ಆಧಾರ್ ಲಿಂಕ್ : ಅಂಚೆ ಕಚೇರಿ ಉಳಿತಾಯ ಖಾತೆದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಕಾಶ್ಮೀರಿ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಮತ್ತು ಎಂಜಿನಿಯರಿಂಗ್ ಕೋರ್ಸ್ ಗಳ ವಿದ್ಯಾರ್ಥಿ ವೇತನ ನೀಡುವುದಕ್ಕೆ ಪಾಕಿಸ್ತಾನ ಮುಂದಾಗಿದೆ ಎನ್ನಲಾಗಿದ್ದು, ಈ ಮೂಲಕ ಅಲ್ಲಿನ ಸ್ಥಳೀಯ ಯುವಕರನ್ನು ತೀವ್ರಗಾಮಿಗಳನ್ನಾಗಿಸಿ ಪ್ರತ್ಯೇಕತಾವಾದದತ್ತ ವಾಲುವಂತೆ ಮಾಡುವ ಗೇಮ್‌ ಪ್ಲಾನ್‌ ಪಾಖ್‌ ಮಾಡುತ್ತಿದೆಯಂತೆ. 2018 ರ ಫೆಬ್ರವರಿಯಲ್ಲಿ ಭಯೋತ್ಪಾದಕ ಧನಸಹಾಯ ಪ್ರಕರಣದಲ್ಲಿ ಎನ್‌ಐಎ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ.

ಒಂದೇ ಓವರ್ ನಲ್ಲಿ 6,6,6,6,6.6: ಯುವಿ ದಾಖಲೆ ಸರಿಗಟ್ಟಿದ ಪೊಲಾರ್ಡ್

ಯುವ ವಿದ್ಯಾರ್ಥಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸುವುದನ್ನು ಹುರಿಯತ್ ನಾಯಕರುಗಳಾದ ಗಿಡುಗ ಸೈಯದ್ ಅಲಿ ಶಾ ಗೀಲಾನಿ ಮತ್ತು ಹುರಿಯತ್ ಮಿರ್ವಾಯಿಜ್ ಉಮರ್ ಫಾರೂಕ್ ನಿರ್ವಹಿಸುತ್ತಿದ್ದರು. ಅವರು ವಿದ್ಯಾರ್ಥಿಗಳಿಗೆ ವೀಸಾಗಳಿಗಾಗಿ ಶಿಫಾರಸುಗಳ ಪತ್ರಗಳನ್ನು ಒದಗಿಸುತ್ತಿದ್ದರು ಎನ್ನಲಾಗಿದೆ. 'ವಿದ್ಯಾರ್ಥಿ ವೀಸಾದ ಡಿವಿಷನ್ ನಲ್ಲಿ ಪಾಕಿಸ್ತಾನಕ್ಕೆ ತೆರಳುವ ವಿದ್ಯಾರ್ಥಿಗಳು ಮಾಜಿ ಉಗ್ರರ ಸಂಬಂಧಿಗಳು ಅಥವಾ ಸಕ್ರಿಯ ಉಗ್ರರ ಕುಟುಂಬಗಳ ಸಂಬಂಧಿಕರಾಗಿದ್ದು, ಅವರು ಪಾಕಿಸ್ತಾನಕ್ಕೆ ವಲಸೆ ಹೋಗಿರಬಹುದು ಎಂದು ಎನ್ ಐಎ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.

ಉದ್ಯೋಗಿಗಳಿಗೆ ಮಹತ್ವದ ಮಾಹಿತಿ : ಏಪ್ರಿಲ್ 1ರಿಂದ ಕೆಲಸದ ಅವಧಿ 12 ಗಂಟೆಗೆ ಹೆಚ್ಚಳ?Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top