Dailyhunt
ಬಿಹಾರ ರಾಜಕಾರಣದಲ್ಲಿ ಬಿಗ್‌ ಟ್ವಿಸ್ಟ್: ಶುಕ್ರವಾರ ರಾಜ್ಯಸಭಾ ಸದಸ್ಯರಾಗಿ ನಿತೀಶ್ ಕುಮಾರ್ ಪ್ರಮಾಣ ವಚನ; ಏ. 14ಕ್ಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಾಧ್ಯತೆ!

ಬಿಹಾರ ರಾಜಕಾರಣದಲ್ಲಿ ಬಿಗ್‌ ಟ್ವಿಸ್ಟ್: ಶುಕ್ರವಾರ ರಾಜ್ಯಸಭಾ ಸದಸ್ಯರಾಗಿ ನಿತೀಶ್ ಕುಮಾರ್ ಪ್ರಮಾಣ ವಚನ; ಏ. 14ಕ್ಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಾಧ್ಯತೆ!

Kannada News Now 1 week ago

ವದೆಹಲಿ:ಬಿಹಾರದ ಸುದೀರ್ಘ ಕಾಲದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ರಾಜಕೀಯ ಜೀವನದ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ. ಈ ಶುಕ್ರವಾರ (ಏಪ್ರಿಲ್ 10) ಅವರು ನವದೆಹಲಿಯಲ್ಲಿ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಅದರ ಬೆನ್ನಲ್ಲೇ ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಾಗಿದೆ.

ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವ ನಿತೀಶ್ ಕುಮಾರ್, ಏಪ್ರಿಲ್ 9 ರಂದು ದೆಹಲಿಗೆ ತೆರಳಲಿದ್ದು, ಏಪ್ರಿಲ್ 10 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಮೂಲಗಳ ಪ್ರಕಾರ, ದೆಹಲಿಯಿಂದ ಮರಳಿದ ನಂತರ ಏಪ್ರಿಲ್ 13 ಅಥವಾ 14 ರಂದು ಅವರು ರಾಜ್ಯಪಾಲರಿಗೆ ಅಧಿಕೃತವಾಗಿ ತಮ್ಮ ರಾಜೀನಾಮೆ ಸಲ್ಲಿಸಲಿದ್ದಾರೆ. ಅಂಬೇಡ್ಕರ್ ಜಯಂತಿಯಂದೇ (ಏಪ್ರಿಲ್ 14) ಬಿಹಾರದಲ್ಲಿ ಹೊಸ ಸರ್ಕಾರದ ರಚನೆಗೆ ಚಾಲನೆ ಸಿಗುವ ಸಾಧ್ಯತೆಯಿದೆ.

ನಿತೀಶ್ ಕುಮಾರ್ ನಿರ್ಗಮನದ ನಂತರ ಬಿಜೆಪಿ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಪ್ರಸ್ತುತ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಅಥವಾ ವಿಜಯ್ ಕುಮಾರ್ ಸಿನ್ಹಾ ಅವರಲ್ಲಿ ಒಬ್ಬರು ಮುಖ್ಯಮಂತ್ರಿ ಗಾದಿಗೇರುವ ಸಾಧ್ಯತೆ ದಟ್ಟವಾಗಿದೆ.

ನಿತೀಶ್ ಕುಮಾರ್ ಸಿಎಂ ಸ್ಥಾನದಿಂದ ಕೆಳಗಿಳಿದರೂ, ಎನ್‌ಡಿಎ (NDA) ಮೈತ್ರಿಕೂಟದ ಮಾರ್ಗದರ್ಶಕರಾಗಿ ಮುಂದುವರಿಯಲಿದ್ದಾರೆ. ಜೆಡಿಯು ಪಕ್ಷಕ್ಕೆ ಮುಂದಿನ ಸಂಪುಟದಲ್ಲಿ ಸ್ಪೀಕರ್ ಸ್ಥಾನ ಅಥವಾ ಪ್ರಮುಖ ಖಾತೆಗಳನ್ನು ನೀಡುವ ಕುರಿತು ಚರ್ಚೆಗಳು ನಡೆಯುತ್ತಿವೆ.ನಿತೀಶ್ ಕುಮಾರ್ ಅವರು ಸಂಸತ್ತಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಕೇಂದ್ರ ಸರ್ಕಾರದಿಂದ 'Z+' ದರ್ಜೆಯ ಭದ್ರತೆಯನ್ನು ಈಗಾಗಲೇ ಘೋಷಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now