ನವದೆಹಲಿ: 2026 ರಿಂದ ಪ್ರಾರಂಭವಾಗುವ ದ್ವೈವಾರ್ಷಿಕ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ CBSE ಅನುಮೋದನೆ ನೀಡಿದೆ. ಹೀಗಾಗಿ 2026ರಿಂದ 10ನೇ ತರಗತಿ ಸಿಬಿಎಸ್ಸಿ ಬೋರ್ಡ್ ಪರೀಕ್ಷೆಯು ವರ್ಷದಲ್ಲಿ ಎರಡು ಬಾರಿ ನಡೆಯಲಿದೆ.
ಬುಧವಾರ ಸಿಬಿಎಸ್‌ಇ ತೆಗೆದುಕೊಂಡ ದೊಡ್ಡ ನಿರ್ಧಾರದಲ್ಲಿ, 2026 ರಿಂದ ವರ್ಷಕ್ಕೆ ಎರಡು ಬಾರಿ 10ನೇ ತರಗತಿ ಪರೀಕ್ಷೆಗಳನ್ನು ನಡೆಸಲು ಮಂಡಳಿಯು ಅನುಮೋದನೆ ನೀಡಿದೆ.
10 ನೇ ತರಗತಿಯ ವಿದ್ಯಾರ್ಥಿಗಳು ಮೊದಲ ಹಂತದ ಪರೀಕ್ಷೆಗಳಿಗೆ ಹಾಜರಾಗುವುದು ಕಡ್ಡಾಯವಾಗಿದೆ ಎಂದು ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ಹೇಳಿದ್ದಾರೆ. ಮಂಡಳಿಯ ಪ್ರಕಾರ ಎರಡನೇ ಹಂತವು ಐಚ್ಛಿಕವಾಗಿದೆ ಎಂದು ತಿಳಿಸಿದೆ.
ಮೊದಲ ಹಂತದ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್‌ನಲ್ಲಿ ಮತ್ತು ಎರಡನೇ ಹಂತದ ಫಲಿತಾಂಶವನ್ನು ಜೂನ್‌ನಲ್ಲಿ ಪ್ರಕಟಿಸಲಾಗುವುದು. ಆಂತರಿಕ ಮೌಲ್ಯಮಾಪನವನ್ನು ಒಮ್ಮೆ ಮಾತ್ರ ನಡೆಸಲಾಗುತ್ತದೆ ಎಂದು ಹೇಳಿದೆ.

