Dailyhunt Logo
  • Light mode
    Follow system
    Dark mode
    • Play Story
    • App Story
BREAKING : ಬೆಂಗಳೂರಲ್ಲಿ ವಾಹನ ತೊಳೆಯಲು, ಈಜುಕೋಳಗಳಿಗೆ ಕುಡಿಯುವ ನೀರು ಬಳಸಿದರೆ ಬೀಳುತ್ತೆ ಭಾರಿ ದಂಡ!

BREAKING : ಬೆಂಗಳೂರಲ್ಲಿ ವಾಹನ ತೊಳೆಯಲು, ಈಜುಕೋಳಗಳಿಗೆ ಕುಡಿಯುವ ನೀರು ಬಳಸಿದರೆ ಬೀಳುತ್ತೆ ಭಾರಿ ದಂಡ!

Kannada News Now 4 months ago

ಬೆಂಗಳೂರು : ಬೆಂಗಳೂರಿನಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ನಗರದಲ್ಲಿ ತಲೆದೋರಬಹುದಾದ ತೀವ್ರ ಜಲಕ್ಷಾಮವನ್ನು ಎದುರಿಸಲು ಬೆಂಗಳೂರು ಜಲಮಂಡಳಿ (BWSSB) ಈಗಿನಿಂದಲೇ ಎಚ್ಚೆತ್ತುಕೊಂಡಿದೆ. ಭವಿಷ್ಯದ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿಯಂತ್ರಿಸಲು ಕಠಿಣ ನೀರು ಉಳಿತಾಯ ಕ್ರಮಗಳನ್ನು ಜಾರಿಗೆ ತಂದಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಇವುಗಳನ್ನು ಪಾಲಿಸುವಂತೆ ಆದೇಶ ಹೊರಡಿಸಿದೆ.

ಜಲಮಂಡಳಿಯ ಹೊಸ ನಿಯಮಗಳ ಪ್ರಕಾರ, ನಗರದ ಎಲ್ಲಾ ಮನೆಗಳು, ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಕಟ್ಟಡಗಳು, ಸರ್ಕಾರಿ ಕಚೇರಿಗಳು, ಹೋಟೆಲ್‌ಗಳು ಮತ್ತು ಕೈಗಾರಿಕೆಗಳಲ್ಲಿ ನೀರಿನ ನಲ್ಲಿಗಳಿಗೆ 'ವಾಟರ್‌ಫ್ಲೋ ರೆಸ್ಟ್ರಿಕ್ಟರ್' (Water flow Restrictor) ಮತ್ತು 'ಏರೇಟರ್‌' (Aerator) ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಜಲಮಂಡಳಿ ಅಧ್ಯಕ್ಷೆ ಡಾ. ಮಂಜುಳಾ ಅವರು, "ನಲ್ಲಿಗಳಿಗೆ ಏರೇಟರ್‌ಗಳನ್ನು ಅಳವಡಿಸುವುದರಿಂದ ನೀರಿನ ದೈನಂದಿನ ಬಳಕೆಯನ್ನು ಶೇ. 30 ರಿಂದ 50 ರಷ್ಟು ಕಡಿತಗೊಳಿಸಬಹುದಾಗಿದೆ. ಇದರಿಂದ ನಾಗರಿಕರ ನಿಯಮಿತ ನೀರಿನ ಬಳಕೆಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಮತ್ತು ದೊಡ್ಡ ಪ್ರಮಾಣದಲ್ಲಿ ನೀರನ್ನು ಉಳಿಸಲು ಸಾಧ್ಯವಾಗುತ್ತದೆ" ಎಂದು ತಿಳಿಸಿದ್ದಾರೆ.

ಕುಡಿಯುವ ನೀರಿನ ದುರ್ಬಳಕೆಗೆ ಕಠಿಣ ನಿಷೇಧ

ಕುಡಿಯುವ ನೀರನ್ನು ಅನಗತ್ಯ ಕೆಲಸಗಳಿಗೆ ಪೋಲು ಮಾಡುವುದನ್ನು ತಡೆಯಲು ಜಲಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇನ್ಮುಂದೆ ಕೆಳಗಿನ ಉದ್ದೇಶಗಳಿಗಾಗಿ ಕಾವೇರಿ ಅಥವಾ ಕುಡಿಯುವ ನೀರನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ:

  • ವಾಹನಗಳನ್ನು ತೊಳೆಯುವುದು.

  • ತೋಟ ಹಾಗೂ ಉದ್ಯಾನಗಳಿಗೆ ನೀರು ಹಾಯಿಸುವುದು.

  • ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು (Footpaths) ಸ್ವಚ್ಛಗೊಳಿಸುವುದು.

  • ಕಟ್ಟಡ ನಿರ್ಮಾಣ ಕಾಮಗಾರಿಗಳು ಮತ್ತು ಇತರೆ ವಾಣಿಜ್ಯ ಉದ್ದೇಶಗಳು.

ಗಮನಿಸಿ: ಈ ಎಲ್ಲಾ ಉದ್ದೇಶಗಳಿಗೆ ಸಾರ್ವಜನಿಕರು ಕಡ್ಡಾಯವಾಗಿ ಸಂಸ್ಕರಿತ ನೀರನ್ನು (Treated Water) ಮಾತ್ರ ಬಳಸಬೇಕು ಎಂದು ಜಲಮಂಡಳಿ ಸ್ಪಷ್ಟಪಡಿಸಿದೆ.

ಈಜುಕೊಳಗಳಿಗೂ ನಿಯಮ ಅನ್ವಯ

ನಗರದಲ್ಲಿರುವ ಖಾಸಗಿ ಹಾಗೂ ಸಾರ್ವಜನಿಕ ಈಜುಕೊಳಗಳಿಗೂ (Swimming Pools) ಜಲಮಂಡಳಿಯ ನಿಯಮ ಅನ್ವಯಿಸಲಿದೆ. ಯಾವುದೇ ಈಜುಕೊಳಗಳಲ್ಲಿ ಕುಡಿಯುವ ನೀರನ್ನು ಬಳಸುವಂತಿಲ್ಲ. ಇದರ ಬದಲಾಗಿ ಸಂಸ್ಕರಿತ ನೀರು ಅಥವಾ ಇತರೆ ಪರ್ಯಾಯ ಮೂಲಗಳಿಂದ ದೊರೆಯುವ ನೀರನ್ನು ಮಾತ್ರ ಬಳಸಲು ಸೂಚಿಸಲಾಗಿದೆ.

ನಿಯಮ ಉಲ್ಲಂಘಿಸಿದರೆ ಭಾರಿ ದಂಡದ ಬಿಸಿ!

ಜಲಮಂಡಳಿ ಜಾರಿಗೆ ತಂದಿರುವ ಈ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಉಲ್ಲಂಘನೆಯ ಸ್ವರೂಪಜಲಮಂಡಳಿ ಕೈಗೊಳ್ಳುವ ಕ್ರಮ / ವಿಧಿಸುವ ದಂಡ
ಮೊದಲ ಬಾರಿ ನಿಯಮ ಉಲ್ಲಂಘನೆಸರಬರಾಜು ಮಾಡುವ ನೀರಿನ ಪ್ರಮಾಣದಲ್ಲಿ ಶೇ. 50 ರಷ್ಟು ಕಡಿತ ಮತ್ತು ₹5,000 ದಂಡ
ಉಲ್ಲಂಘನೆ ಮುಂದುವರಿಸಿದರೆಪ್ರತಿದಿನ ₹500 ಹೆಚ್ಚುವರಿ ದಂಡ ಮತ್ತು ಕಾನೂನು ಕ್ರಮ
Dailyhunt
Disclaimer: This content has not been generated, created or edited by Dailyhunt. Publisher: Kannada News Now