Dailyhunt
BREAKING : ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮುಂದುವರೆದ ರಕ್ತಪಾತ : ಮತ್ತೆ 1,600 ಅಂಕಕ್ಕೆ ಕುಸಿದ ಸನ್ಸೆಕ್ಸ್

BREAKING : ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮುಂದುವರೆದ ರಕ್ತಪಾತ : ಮತ್ತೆ 1,600 ಅಂಕಕ್ಕೆ ಕುಸಿದ ಸನ್ಸೆಕ್ಸ್

Kannada News Now 2 weeks ago

ಮುಂಬೈ : ಅಮೆರಿಕಾ ಇರಾನ್ ನಡುವಿನ ಸಂಧನ ಮಾತುಕತೆ ವಿಫಲ ಹಾಗೂ ಜಲಸಂಧಿ ಮೇಲಿನ ಅಮೆರಿಕ ದಿಗ್ಬಂಧನ ಹಿನ್ನೆಲೆಯಲ್ಲಿ ಭಾರತೀಯ ಶೇರು ಮಾರುಕಟ್ಟೆಯಲ್ಲಿ ಇದೀಗ ಮತ್ತೆ ರಕ್ತಪಾತ ನಡೆದಿದೆ. ಹೌದು ಮುಂಬೈ ಷೇರು ಮಾರುಕಟ್ಟೆಯಲ್ಲಿ ಮತ್ತೆ ರಕ್ತಪಾತ ಆಗಿದ್ದು, ಸನ್ಸೆಕ್ಸ್ 1,600 ಅಂಕಕ್ಕೆ ಕುಸಿದಿದ್ದು, 400ಕ್ಕೂ ಹೆಚ್ಚು ಪಾಯಿಂಟ್ ನಿಫ್ಟಿ ಕುಸಿತ ಕಂಡಿದೆ.

ಇಂದು ವಹಿವಾಟು ಆರಂಭವಾಗುತ್ತಿದ್ದಂತೆಯೇ ಮುಂಬೈ ಷೇರು ಮಾರುಕಟ್ಟೆ ತೀವ್ರ ಕುಸಿತಕ್ಕೆ ಸಾಕ್ಷಿಯಾಯಿತು. ಜಾಗತಿಕ ಮಾರುಕಟ್ಟೆಯಲ್ಲಿನ ನಕಾರಾತ್ಮಕ ಬೆಳವಣಿಗೆಗಳು, ಯುಎಸ್-ಇರಾನ್ ನಡುವಿನ ಉದ್ವಿಗ್ನತೆ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯು ಹೂಡಿಕೆದಾರರಲ್ಲಿ ಭೀತಿ ಮೂಡಿಸಿದೆ. ಪರಿಣಾಮವಾಗಿ ಬಿಎಸ್‌ಇ (BSE) ಸೆನ್ಸೆಕ್ಸ್ 1,600ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡು 72,000 ಮಟ್ಟಕ್ಕೆ ಕುಸಿದಿದೆ. ಬ್ಯಾಂಕಿಂಗ್, ಆಟೋ ಮತ್ತು ಐಟಿ ವಲಯದ ಷೇರುಗಳು ಭಾರಿ ನಷ್ಟ ಅನುಭವಿಸಿವೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now