Dailyhunt Logo
  • Light mode
    Follow system
    Dark mode
    • Play Story
    • App Story
BREAKING: ಬ್ರಿಕ್ಸ್ ಶೃಂಗಸಭೆ: 'ನವದೆಹಲಿ ಘೋಷಣೆ'ಗೆ ಸರ್ವಾನುಮತದ ಒಪ್ಪಿಗೆ!

BREAKING: ಬ್ರಿಕ್ಸ್ ಶೃಂಗಸಭೆ: 'ನವದೆಹಲಿ ಘೋಷಣೆ'ಗೆ ಸರ್ವಾನುಮತದ ಒಪ್ಪಿಗೆ!

ವದೆಹಲಿ: ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದ್ದು, ಸದಸ್ಯ ರಾಷ್ಟ್ರಗಳ ಸರ್ವಸಮ್ಮತಿಯೊಂದಿಗೆ 'ನವದೆಹಲಿ ಘೋಷಣಾಪತ್ರ'ವನ್ನು (New Delhi Declaration) ಅಧಿಕೃತವಾಗಿ ಅಂಗೀಕರಿಸಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಎಲ್ಲಾ ಸದಸ್ಯ ರಾಷ್ಟ್ರಗಳ ನಾಯಕರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ, ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಕೇವಲ ದಾಖಲೆಗಳಿಗೆ ಸೀಮಿತಗೊಳಿಸದೆ ನೆಲಮಟ್ಟದಲ್ಲಿ ಫಲಪ್ರದಗೊಳಿಸುವುದು ಒಕ್ಕೂಟದ ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದರು.

ಹಳತಾದ ವ್ಯವಸ್ಥೆಗಳಿಂದ ಬದಲಾಗುತ್ತಿರುವ ಜಗತ್ತನ್ನು ಮುನ್ನಡೆಸಲು ಸಾಧ್ಯವಿಲ್ಲ

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಒಕ್ಕೂಟದ ಸದಸ್ಯರ ನಡುವೆ ವೈವಿಧ್ಯಮಯ ದೃಷ್ಟಿಕೋನಗಳಿದ್ದರೂ ಸಹಕಾರ ಮತ್ತು ಬದ್ಧತೆ ದೃಢವಾಗಿ ಹೊರಹೊಮ್ಮಿದೆ ಎಂದರು. "ಬದಲಾಗುತ್ತಿರುವ ಇಂದಿನ ಜಗತ್ತನ್ನು ಹಳೆಯ ಹಾಗೂ ಕಾಲಾವಧಿ ಮೀರಿದ ಸಂಸ್ಥೆಗಳ ಮೂಲಕ ಮುನ್ನಡೆಸಲು ಸಾಧ್ಯವಿಲ್ಲ ಎಂಬುದು ಇಂದಿನ ಚರ್ಚೆಯಿಂದ ಸ್ಪಷ್ಟವಾಗಿದೆ. ಜಾಗತಿಕ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ, ಸ್ಪಂದನಶೀಲತೆ ಮತ್ತು ನೀತಿ-ನಿಯಮಗಳ ರಚನೆಯಲ್ಲಿ ಸಮಗ್ರ ಸುಧಾರಣೆಗಳು ಅತ್ಯಗತ್ಯವಾಗಿವೆ" ಎಂದು ಅವರು ಪ್ರತಿಪಾದಿಸಿದರು.

ತಂತ್ರಜ್ಞಾನ ಮತ್ತು 'ಗ್ಲೋಬಲ್ ಸೌತ್'ಗೆ ಸಮಾನ ಹಕ್ಕು

ಭವಿಷ್ಯದ ಅತ್ಯಾಧುನಿಕ ತಂತ್ರಜ್ಞಾನಗಳ ಅಭಿವೃದ್ಧಿ ಹಾಗೂ ಅವುಗಳನ್ನು ನಿಯಂತ್ರಿಸುವ ನೀತಿ-ನಿಯಮಾವಳಿಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಗ್ಲೋಬಲ್ ಸೌತ್ (ಅಭಿವೃದ್ಧಿಶೀಲ ರಾಷ್ಟ್ರಗಳು) ಸಮಾನ ಪಾಲುದಾರಿಕೆ ಹೊಂದಿರಬೇಕು ಎಂದು ಪ್ರಧಾನಿ ಬಲವಾಗಿ ಪ್ರತಿಪಾದಿಸಿದರು. ತೀರ್ಮಾನಗಳು ಹಾಗೂ ಅವುಗಳ ಅನುಷ್ಠಾನದ ನಡುವಿನ ಅಂತರವನ್ನು ಪರಸ್ಪರ ಪಾಲುದಾರಿಕೆ ಮತ್ತು ಸಾಮೂಹಿಕ ಪ್ರಯತ್ನಗಳ ಮೂಲಕವೇ ಸರಿದೂಗಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

Dailyhunt
Disclaimer: This content has not been generated, created or edited by Dailyhunt. Publisher: Kannada News Now