Dailyhunt Logo
  • Light mode
    Follow system
    Dark mode
    • Play Story
    • App Story
BREAKING : ಚಿಕ್ಕಬಳ್ಳಾಪುರದಲ್ಲಿ ಬೈಕ್ ಗೆ 'KSRTC' ಬಸ್ ಡಿಕ್ಕಿ : ಸ್ಥಳದಲ್ಲಿ ವೃದ್ಧ ದಂಪತಿ ಸಾವು!

BREAKING : ಚಿಕ್ಕಬಳ್ಳಾಪುರದಲ್ಲಿ ಬೈಕ್ ಗೆ 'KSRTC' ಬಸ್ ಡಿಕ್ಕಿ : ಸ್ಥಳದಲ್ಲಿ ವೃದ್ಧ ದಂಪತಿ ಸಾವು!

Kannada News Now 2 days ago

ಚಿಕ್ಕಬಳ್ಳಾಪುರ : ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ವೃದ್ಧ ದಂಪತಿಗಳು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸಾಧಲಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ನಡೆದಿದೆ. ಅಪಘಾತದಲ್ಲಿ ವಿರುದ್ಧ ದಂಪತಿಗಳಾದ ಲಕ್ಷ್ಮಣ (75) ಮತ್ತು ರತ್ನಮ್ಮ (70) ಸಾವನಪ್ಪಿದ್ದಾರೆ.

ಮೃತ ದಂಪತಿ ಶಿಡ್ಲಘಟ್ಟ ತಾಲೂಕಿನ ತಿರುಕಾಚೇನಹಳ್ಳಿ ನಿವಾಸಿಗಳು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಟಿವಿಎಸ್ ಎಕ್ಸೆಲ್ ವಾಹನದಲ್ಲಿ ವೃದ್ಧ ದಂಪತಿಗಳು ತೆರಳುತ್ತಿದ್ದರು. ಈ ವೇಳೆ ಬಸ್ ಬರೋದನ್ನು ನೋಡದೆ ರಸ್ತೆ ತಿರುವು ಪಡೆದಾಗ ಬಸ್ ಡಿಕ್ಕಿ ಹೊಡೆದಿದೆ. ಟಿ ವಿ ಎಸ್ ಗೆ ಹಿಂದಿನಿಂದ ಬರುತ್ತಿದ್ದ ಕೆಎಸ್‌ಆರ್ಟಿಸಿ ಬಸ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶದ ಕದಿರೆಯಿಂದ ಕೆಎಸ್‌ಆರ್ಟಿಸಿ ಬಸ್ ಬೆಂಗಳೂರಿಗೆ ಬರುತ್ತಿತ್ತು. ಪೆರೆಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ

Dailyhunt
Disclaimer: This content has not been generated, created or edited by Dailyhunt. Publisher: Kannada News Now