Tuesday, 26 Jan, 2.35 pm Kannada News Now

ಭಾರತ
Breaking:‌ ಹಿಂಸಾರೂಪ ಪಡೆದ ಅನ್ನದಾತರ ಧರಣಿ: ಕೆಂಪುಕೋಟೆಗೆ ರೈತರ ಮುತ್ತಿಗೆ, ಧ್ವಜಸ್ತಂಭವೇರಿ ಮತ್ತೊಂದು ಬಾವುಟ ಹಾರಿಸಲು ಯತ್ನ

ನವದೆಹಲಿ: ಕಳೆದ ವರ್ಷ ಸೆಪ್ಟೆಂಬರ್ʼನಲ್ಲಿ ಸರ್ಕಾರ ಜಾರಿಗೆ ಬಂದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಹಿಂಸರೂಪ ಪಡೆಸಿದ್ದು,ಅಕ್ಷರಶಃ ರಾಷ್ಟ್ರ ರಾಜಧಾನಿ ರಣರಂಗವಾಗಿದೆ.

ಪ್ರತಿಭಟನೆ ನಿರತ ರೈತರು ಕೆಂಪುಕೋಟೆಗೆ ನುಗ್ಗಿದ್ದು, ಧ್ವಜಾರೋಹಣ ಸ್ಥಳಕ್ಕೆ ತೆರಳಿ ಧ್ವಜಸ್ತಂಭ ಏರಿ ಮತ್ತೊಂದು ಬಾವುಟ ಹಾರಿಸಲು ಯತ್ನ ನಡೆಯುತ್ತಿದ್ದಾರೆ.ಕಿಸಾನ್ ಯೂನಿಯನ್ ಈ ಧ್ವಜಾರೋಹಣಕ್ಕೆ ಪ್ರಯತ್ನ ಮಾಡುತ್ತಿದೆ.

ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿಲ್ಲ, ರೈತರ ಪ್ರತಿಭಟನೆ ಹತ್ತಿಕ್ಕಿಲ್ಲ : ಮಾಜಿ ಸಿಎಂಗೆ ಸಿಎಂ ಯಡಿಯೂರಪ್ಪ ತಿರುಗೇಟು

ಅಂದ್ಹಾಗೆ, ಇದಕ್ಕೂ ಮುನ್ನ ನವದೆಹಲಿಯ ಗಾಜಿಪುರ ಗಡಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿಗೆ ತೆರಳಿದ್ದ ರೈತರ ಮೇಲೆ ಅಶ್ರುವಾಯು ಪ್ರಯೋಗ ಮಾಡಲಾಗಿದೆ. ಕಿಸಾನ್ ಟ್ರ್ಯಾಕ್ಟರ್ ಪರೇಡ್‌ʼಗೆ ತೆರಳಿದ್ದ ರೈತರ ಮೇಲೆ ಮನಬಂದಂತೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಕೆಲವೆಡೆ ಪೊಲೀಸರ ಬ್ಯಾರಿಕೇಡ್ ತಳ್ಳಿ ನುಗ್ಗಲು ರೈತರು ಯತ್ನಿಸುತ್ತಿದ್ದಾರೆ. ದೆಹಲಿಯ ಸಿಂಘು ಗಡಿಯಲ್ಲಿ ರೈತರ ಮೇಲೆ ಲಾಠಿಚಾರ್ಜ್‌ ಮಾಡಲಾಗುತ್ತಿದೆ. ಹಾಗೂ ಅಕ್ಷರಧಾಮ ಬಳಿ ರೈತರ ಮೇಲೆ ಜಲಫಿರಂಗಿ ಪ್ರಯೋಗ ಮಾಡಲಾಗುತ್ತಿದೆ. ಪೊಲೀಸರ ಈ ನಡೆಯಿಂದ ಕೆರಳಿತದ ಅನ್ನದಾತರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ಹಲವು ಪೊಲೀಸರಿಗೆ ಗಂಭೀರ ಗಾಯಗಳಾಗಿವೆ.

ʼಆಧಾರ್‌ ಕಾರ್ಡ್‌ʼನಲ್ಲಿ ನೀವು ನಿಮ್ಮ ಫೋಟೋ ಚೇಂಜ್‌ ಮಾಡ್ಬೇಕಾ? ಈ ಹಂತಗಳನ್ನ ಅನುಸರಿಸಿ..!Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top