Kannada News Now

1.8M Followers

BREAKING: ಕೆಲವೇ ಗಂಟೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಕಂಟ್ರೋಲ್ ಸಭೆ ಆರಂಭ: ರಾಜ್ಯದಲ್ಲಿ 10 ದಿನ ಲಾಕ್ ಡೌನ್ ಫಿಕ್ಸ್.?

11 Jan 2022.2:11 PM

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರು ಇಂದು ಮಧ್ಯಾಹ್ನ 3 ಗಂಟೆಗೆ ರಾಜ್ಯದ ಕೋವಿಡ್ ಸ್ಥಿತಿಗತಿಗೆ ( Covid-19 ) ಸಂಬಂಧಪಟ್ಟಂತೆ ಹಿರಿಯ ಅಧಿಕಾರಿಗಳ ಮತ್ತು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರ ವರ್ಚುವಲ್ ಸಭೆ ಕರೆದಿದ್ದಾರೆ.

ಈ ಸಭೆಯಲ್ಲಿ ಮಹತ್ವದ ವಿಚಾರಗಳನ್ನು ಚರ್ಚಿಸಲಿರೋ ಅವರು, ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ 10 ದಿನ ಲಾಕ್ ಡೌನ್ ( Lockdown ) ಜಾರಿಗೊಳಿಸಲಿದ್ದಾರೆ ಎನ್ನಲಾಗುತ್ತಿದೆ. ಆ ಸಭೆ ಆರಂಭಕ್ಕೆ ಕೆಲವೇ ಗಂಟೆ ಬಾಕಿ ಇದ್ದು, ಮತ್ತೆ 10 ದಿನ ಲಾಕ್ ಡೌನ್ ಫಿಕ್ಸ್ ಎಂದು ಹೇಳಲಾಗುತ್ತಿದೆ.

BIGG NEWS: ರಾಜ್ಯದಲ್ಲಿ ಫೆಬ್ರವರಿಯಲ್ಲಿ ಮತ್ತೆ ಲಾಕ್​ಡೌನ್ ಫಿಕ್ಸ್: ಮೊದಲ ಹಂತದಲ್ಲಿ 10 ದಿನ ಲಾಕ್.​? | Karnataka Lockdown

ನಿನ್ನೆ ಕೊರೋನಾ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಿಂದ ದೃಢಪಟ್ಟಿದ್ದಂತ ಸಿಎಂ ಬಸವರಾಜ ಬೊಮ್ಮಾಯಿಯವರು, ಇಂದು ಓಲ್ಡ್ ಮದ್ರಾಸ್ ರಸ್ತೆಯಲ್ಲಿನ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರನ್ನು ವಿವಿಧ ಪರೀಕ್ಷೆಗೆ ಒಳಪಡಿಸಿದಂತ ವೈದ್ಯರು, ಸೌಮ್ಯ ಲಕ್ಷಣಗಳಿರೋ ಕಾರಣ, ಮನೆಯಲ್ಲಿಯೋ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುವಂತೆ ಡಿಸ್ಚಾರ್ಜ್ ಮಾಡಿ ಕಳುಹಿಸಿದ್ದಾರೆ.

BIGG BREAKING NEWS: ಸಿಎಂ ಬಸವರಾಜ ಬೊಮ್ಮಾಯಿ ಆಸ್ಪತ್ರೆಯಿಂದ ಡಿಸ್ಚಾರ್ಜ್, 1 ವಾರ ಹೋಂ ಕ್ವಾರಂಟೈನ್ | CM Basavaraj Bommai

ಇದೀಗ ಸಿಎಂ ಬಸವರಾಜ ಬೊಮ್ಮಾಯಿಯವರು ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಆರ್ ಟಿ ನಗರದ ತಮ್ಮ ನಿವಾಸಕ್ಕೆ ತೆರಳಿದ್ದಾರೆ. ಇಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ರಾಜ್ಯದ ಕೊರೋನಾ ಸ್ಥಿತಿಗತಿ ಬಗ್ಗೆ ಚರ್ಚಿಸೋದಕ್ಕೆ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರ ಸಭೆಯನ್ನು ನಡೆಸಲಿದ್ದಾರೆ. ವರ್ಚೂಯಲ್ ಮೂಲಕ ನಡೆಯುತ್ತಿರುವಂತ ಸಭೆಯಲ್ಲಿ ತಜ್ಞರು, ಸಚಿವರು ಭಾಗಿಯಾಗಲಿದ್ದಾರೆ.

Big Breaking News: 'ಯುಪಿ ವಿಧಾನಸಭಾ ಚುನಾವಣೆ'ಯಿಂದ ಹಿಂದೆ ಸರಿದ 'ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ': '2022ರ ಚುನಾವಣೆ'ಯಲ್ಲಿ ಸ್ಪರ್ಧಿಸದಿಲು ನಿರ್ಧಾರ | BSP Chief Mayawati

ಇಂದು ನಡೆಯುತ್ತಿರುವ ಸಿಎಂ ನೇತೃತ್ವದ ಕೋವಿಡ್ ನಿಯಂತ್ರಣ ಸಭೆ ಮಹತ್ವದ್ದಾಗಿದ್ದು, ರಾಜ್ಯ ರಾಜಧಾನಿ ಸೇರಿದಂತೆ ಕೊರೋನಾ ಹೆಚ್ಚಳವಾಗಿರುವಂತ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿ ಬಗ್ಗೆಯೂ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆರಂಭಿಕವಾಗಿ 10 ದಿನ ಲಾಕ್ ಡೌನ್ ಜಾರಿಗೊಳಿಸೋ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಆ ಸಭೆಯ ಆರಂಭಕ್ಕೆ ಕೆಲವೇ ಗಂಟೆ ಬಾಕಿ ಇದ್ದು, ಯಾವೆಲ್ಲಾ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎನ್ನುವ ಬಗ್ಗೆ ಕಾದು ನೋಡಬೇಕಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags