Dailyhunt Logo
  • Light mode
    Follow system
    Dark mode
    • Play Story
    • App Story
BREAKING : ನಟ ದರ್ಶನ್ ಗೆ ಬಿಗ್ ಶಾಕ್ : ಸಾಕ್ಷಿ ನೀಡುವಂತೆ ಆರೋಪಿ ಪ್ರದೋಷ್ ಗೆ ಕೋರ್ಟ್ ನಿಂದ ಸಮನ್ಸ್ ಜಾರಿ!

BREAKING : ನಟ ದರ್ಶನ್ ಗೆ ಬಿಗ್ ಶಾಕ್ : ಸಾಕ್ಷಿ ನೀಡುವಂತೆ ಆರೋಪಿ ಪ್ರದೋಷ್ ಗೆ ಕೋರ್ಟ್ ನಿಂದ ಸಮನ್ಸ್ ಜಾರಿ!

Kannada News Now 1 week ago

ಬೆಂಗಳೂರು: ನಟ ದರ್ಶನ್ ಹಾಗೂ ಅವರ ಗ್ಯಾಂಗ್‌ನಿಂದ ನಡೆದಿದೆ ಎನ್ನಲಾದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ತೀವ್ರಗೊಂಡಿದೆ. ಪ್ರಕರಣದ ಮುಂದಿನ ವಿಚಾರಣೆ ಭಾಗವಾಗಿ, ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಪ್ರದೋಷ್‌ಗೆ ಸಾಕ್ಷಿ ನೀಡುವಂತೆ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿ ಆದೇಶಿಸಿದೆ.

ವಿಚಾರಣೆ ವೇಳೆ ವಿಶೇಷ ಸಾರ್ವಜನಿಕ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನ ಕುಮಾರ್ ಅವರು, ಪ್ರಕರಣದ ಪ್ರಮುಖ ಸಾಕ್ಷ್ಯಗಳ ಹಿನ್ನೆಲೆಯಲ್ಲಿ ಪ್ರದೋಷ್‌ಗೆ 'ವಿಟ್ನೆಸ್ ಸಮನ್ಸ್' ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. ಎಸ್‌ಪಿಪಿ ಅವರ ಸುದೀರ್ಘ ವಾದ ಮತ್ತು ಮನವಿಯನ್ನು ಪುರಸ್ಕರಿಸಿದ 59ನೇ ಸಿಸಿಹೆಚ್ ಕೋರ್ಟ್ ಜಡ್ಜ್ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಅವರು, ಸೆಪ್ಟೆಂಬರ್ 2 ರಂದು ಸಾಕ್ಷಿ ನೀಡಲು ಹಾಜರಾಗುವಂತೆ ಪ್ರದೋಷ್‌ಗೆ ಸೂಚನೆ ನೀಡಿ ಸಮನ್ಸ್ ಹೊರಡಿಸಿದ್ದಾರೆ.

ಇದೇ ವೇಳೆ, ಜೈಲಿನಲ್ಲಿರುವ ಪ್ರದೋಷ್‌ಗೆ ತಕ್ಷಣವೇ ಸಮನ್ಸ್ ತಲುಪಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ಸ್ಪಷ್ಟ ಸೂಚನೆ ನೀಡಿದ್ದಾರೆ. ಪ್ರಕರಣದ ಈ ಹಂತದ ವಿಚಾರಣೆ ಮತ್ತು ಸಾಕ್ಷಿ ಸಲ್ಲಿಕೆಯು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಪ್ರಮುಖ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now