Kannada News Now
1.7M Followersನವದೆಹಲಿ: ಪರೀಕ್ಷೆಗಳನ್ನ ರದ್ದುಗೊಳಿಸುವ ಸಿಬಿಎಸ್ ಇ ಮತ್ತು ಐಸಿಎಸ್ ಇ ನಿರ್ಧಾರವನ್ನ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನ ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ವಿದ್ಯಾರ್ಥಿಗಳ ಪರೀಕ್ಷಾ ಮಾದರಿಯನ್ನ ಮೌಲ್ಯಮಾಪನ ಮಾಡಲು ಮಂಡಳಿಗಳು ಹೊರತಂದ ಮೌಲ್ಯಮಾಪನ ಯೋಜನೆಗೆ ಸುಪ್ರೀಂಕೋರ್ಟ್ ತನ್ನ ಪ್ರತಿಕ್ರಿಯೆಯನ್ನ ನೀಡಿದ್ದು, ಅಂಕಗಳನ್ನ ಲೆಕ್ಕಹಾಕುವ ವಿಧಾನ 'ನ್ಯಾಯೋಚಿತ ಮತ್ತು ಸಮಂಜಸವಾಗಿದೆ' ಎಂದಿದೆ.
ಇನ್ನು 'ಸಿಬಿಎಸ್ ಇ ಮತ್ತು ಐಸಿಎಸ್‌ಇ ಪ್ರತಿಪಾದಿಸಿದ ಯೋಜನೆಯಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನಾವು ನಂಬುತ್ತೇವೆ. ಇದು ಎಲ್ಲಾ ವಿದ್ಯಾರ್ಥಿಗಳ ಕಾಳಜಿಯನ್ನ ಗಣನೆಗೆ ತೆಗೆದುಕೊಳ್ಳುತ್ತದೆ,' ಎಂದು ನ್ಯಾಯಾಲಯ ಹೇಳಿದೆ.
Supreme Court dismisses petitions challenging the CBSE and ICSE decision to cancel examinations and also allows a go-ahead to the assessment scheme brought out by the Boards to evaluate the students' examination pattern.
— ANI (@ANI) June 22, 2021
Disclaimer
This story is auto-aggregated by a computer program and has not been created or edited by Dailyhunt Publisher: Kannada News Now