ನವದೆಹಲಿ : ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 30,549 ಹೊಸ ಪ್ರಕರಣಗಳು ದಾಖಲಾದ ನಂತರ ಕೊರೊನಾ ವೈರಸ್ ಕಾಯಿಲೆಯ ಭಾರತದ ದೈನಂದಿನ ಸಂಖ್ಯೆ 31,726,507 ಕ್ಕೆ ಏರಿದೆ.
ಇನ್ನು ಕಳೆದ ಒಂದೇ ದಿನದಲ್ಲಿ 422 ರೋಗಿಗಳು ವೈರಲ್ ಕಾಯಿಲೆಗೆ ಬಲಿಯಾದರು ಮತ್ತು ಅದೇ ಅವಧಿಯಲ್ಲಿ 38,887 ರೋಗಿಗಳು ಚೇತರಿಸಿಕೊಂಡರು,ಆ ಮೂಲದಕ ದೇಶದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 425,195 ಮತ್ತು ಒಟ್ಟು ಚೇತರಿಕೆ ಸಂಖ್ಯೆ 30,896,354 ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ಮಂಗಳವಾರದ ಪ್ರಕರಣ ಎಣಿಕೆಯು ಸೋಮವಾರದ ಪ್ರಕರಣಕ್ಕಿಂತ 9,585 ಕಡಿಮೆಯಾಗಿದ್ದು, ಸೋಮವಾರ ಕೋವಿಡ್-19 ಪಾಸಿಟಿವ್ ಎಂದು 40,134 ಜನರು ಪತ್ತೆಯಾಗಿದ್ದಾರೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಕೋವಿಡ್-19 ಗಾಗಿ ಒಟ್ಟು 471,294,789 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ 1,649,295 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಅಧಿಕಾರಿಗಳು ಇಲ್ಲಿಯವರೆಗೆ 472,223,639 ಜನರಿಗೆ ಲಸಿಕೆ ಡೋಸ್ ಗಳನ್ನು ನೀಡಿದ್ದಾರೆ, ಅವರಲ್ಲಿ 367,994,586 ಜನರು ಮೊದಲ ಡೋಸ್ ಪಡೆದಿದ್ದಾರೆ ಮತ್ತು ಉಳಿದ 104,229,053 ಜನರು ಎರಡೂ ಡೋಸ್ ಗಳನ್ನು ಪಡೆದಿದ್ದಾರೆ.
Corona 3rd Wave : ಕೇರಳ-ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬರುವವರಿಗೆ `RT-PCR' ನೆಗೆಟಿವ್ ವರದಿ ಕಡ್ಡಾಯ

