Wednesday, 21 Apr, 10.05 pm Kannada News Now

ಕರ್ನಾಟಕ
BREAKING NEWS : ಕೊರೊನಾ ಸ್ಪೋಟ ; ಏಳು 'IPS' ಅಧಿಕಾರಿಗಳನ್ನು ನೇಮಿಸಿ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್‌ನ ಅಟ್ಟಹಾಸ ಮುಂದುವರೆದ ಹಿನ್ನೆಲೆ ರಾಜ್ಯ ಸರ್ಕಾರ 7 ಐಪಿಎಸ್‌ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ.

ಬೆಂಗಳೂರಿನ ವಿಕಾಸಸೌಧದಲ್ಲಿ.ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಗೃಹ ಇಲಾಖೆಯ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪೊಲೀಸ್ ಅಧಿಕಾರಿಗಳ ನೇಮಕ ಮಾಡಲಾಗಿದೆ.

ನೇಮಕಗೊಂಡ ಐಪಿಎಸ್ ಅಧಿಕಾರಿಗಳ ಪಟ್ಟಿ

1) ಭಾಸ್ಕರ್ ರಾವ್ , ಐಪಿಎಸ್, ಎಡಿಜಿಪಿ, ರೈಲ್ವೇಸ್- ಉತ್ತರ ವಲಯ- ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ

2) ಎ.ಎಸ್ ಎನ್ ಮೂರ್ತಿ, ಐಪಿಎಸ್, ಎಂಡಿ, ಕೆಎಸ್ ಪಿ ಹೆಚ್ ಸಿ-ಬಳ್ಳಾರಿ ವಲಯ-ಬಳ್ಳಾರಿ ಮತ್ತು ರಾಯಚೂರು

3) ಅಮ್ರಿತ್ ಪೌಲ್, ಐಪಿಎಸ್, ಎಡಿಜೆಪಿ, ನೇಮಕಾತಿ-ದಕ್ಷಿಣ ವಲಯ-ಮೈಸೂರು, ಮಂಡ್ಯ ಮತ್ತು ಕಲಬುರಗಿ

4) ಅರುಣ್ ಜೆಜೆ ಚಕ್ರವರ್ತಿ, ಐಪಿಎಸ್, ಎಡಿಜಿಪಿ, ಆಂತರಿಕ ಭದ್ರತೆ-ಈಶಾನ್ಯ ವಲಯ- ಬೀದರ್ ಮತ್ತು ಕಲಬುರಗಿ

5) ಸೀಮಂತ್ ಕುಮಾರ್ ಸಿಂಗ್,ಐಪಿಎಸ್, ಎಡಿಜಿಪಿ, ಎಸಿಬಿ-ಕೇಂದ್ರ ವಲಯ-ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು

6) ಉಮೇಶ್ ಕುಮಾರ್, ಐಪಿಎಸ್ ಎಡಿಜೆಪಿ, ಎಸಿಬಿ-ಪೂರ್ವ ವಲಯ, ಶಿವಮೊಗ್ಗ ಮತ್ತು ದಾವಣಗೆರೆ

7) ಹೇಮಂತ್ ನಿಂಬಾಳ್ಕರ್, ಐಪಿಎಸ್ ಪೊಲೀಸ್ ಮಹಾ ನಿರೀಕ್ಷಕರು, ಡಿಸಿ ಆರ್ ಇ -ಪಶ್ಚಿಮ ವಲಯ, ದಕ್ಷಿಣ ಕನ್ನಡ ಉಡುಪಿ



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top