ಹೋಮ್
BREAKING NEWS : ʼಕೋವಾಕ್ಸಿನ್ ಲಸಿಕೆʼಯ ದರ ಘೋಷಿಸಿದ ʼಭಾರತ್ ಬಯೋಟಿಕ್ʼ: ರಾಜ್ಯ ಸರ್ಕಾರಗಳಿಗೆ ₹600, ಖಾಸಗಿ ಆಸ್ಪತ್ರೆಗಳಿಗೆ ₹1200 ನಿಗದಿ
ನವದೆಹಲಿ: ಹೈದರಾಬಾದ್ ಮೂಲದ ಕಂಪನಿ ಭಾರತ್ ಬಯೋಟಿಕ್ ತನ್ನ ಕೊವಾಕ್ಸಿನ್ ಲಸಿಕೆಯ ದರವನ್ನ ಘೋಷಿಸಿದ್ದು, ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್‌ಗೆ ₹600 ಮತ್ತು ಖಾಸಗಿ ಆಸ್ಪತ್ರೆಗಳಿಗೆ ₹1,200ಗೆ ಲಭ್ಯವಾಗಲಿದೆ ಎಂದು ತಿಳಿಸಿದೆ.
'ಭಾರತ ಸರ್ಕಾರದ ನಿರ್ದೇಶನಗಳನ್ನು ಅನುಸರಿಸಿ, ನಾವು ಕೋವಾಕ್ಸಿನ್ ಲಸಿಕೆಗಳ ಬೆಲೆಗಳನ್ನು ಘೋಷಿಸುತ್ತೇವೆ. ರಾಜ್ಯ ಆಸ್ಪತ್ರೆಗಳಿಗೆ ಪ್ರತಿ ಡೋಸ್ ಗೆ ₹600 ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್ ಗೆ 1,200 ₹' ಎಂದು ಭಾರತ್ ಬಯೋಟೆಕ್ ಹೇಳಿದೆ.
ಲಸಿಕೆ ತಯಾರಕರು ಕೊವಾಕ್ಸಿನ್ ಅನ್ನು ಸಹ ರಫ್ತು ಮಾಡಲಾಗುವುದು ಮತ್ತು ರಫ್ತು ಬೆಲೆ $15-20 (₹1,123 ರಿಂದ ₹1,498) ನಡುವೆ ಇರುತ್ತದೆ ಎಂದು ಹೇಳಿದೆ.
#COVID19 | Following the Govt of India directives, we announce the prices of COVAXIN vaccines &dhndash; Rs 600 per dose for state hospitals and Rs 1,200 per dose for private hospitals: Bharat Biotech pic.twitter.com/1m8On8mhKD
— ANI (@ANI) April 24, 2021