Kannada News Now
1.8M Followersನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂಕೆಎಸ್ ಎನ್ ವೈ) ಎಂಟನೇ ಕಂತನ್ನ ನಾಳೆ (ಮೇ.14) ರೈತರ ಖಾತೆಗಳಿಗೆ ವರ್ಗಾಹಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ. ಅದ್ರಂತೆ, 2021-22ರ ಆರ್ಥಿಕ ವರ್ಷದ ಪಿಎಂ ಕಿಸಾನ್ ಯೋಜನೆಯ ಮೊದಲ ಕಂತನ್ನ ಪ್ರಧಾನಿ ಮೋದಿಯವ್ರು ಬಿಡುಗಡೆಗೊಳಿಸಲಿದ್ದಾರೆ.
ನರೇಂದ್ರ ಮೋದಿ ಅವ್ರು ಶುಕ್ರವಾರ ಬೆಳಿಗ್ಗೆ 11ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎನ್ನಲಾಗ್ತಿದೆ.
ಇನ್ನು ಪ್ರಧಾನ ಮಂತ್ರಿಯವರ ಕಚೇರಿ (ಪಿಎಂಒ) ಪ್ರಕಾರ, 9.5 ಕೋಟಿಗಿಂತ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ 19,000 ಕೋಟಿ ರೂಪಾಯಿಗೂ ಹೆಚ್ಚು ಹಣ ವರ್ಗಾವಣೆ ಆಗಲಿದೆ. ಅಂದ್ಹಾಗೆ, ಯೋಜನೆಯ ಅಡಿಯಲ್ಲಿ 7ನೇ ಕಂತನ್ನ ಡಿಸೆಂಬರ್ 25, 2020ರಲ್ಲಿ ಬಿಡುಗಡೆ ಮಾಡಲಾಯಿತು.
PM Modi will release the 8th instalment of financial benefit under Pradhan Mantri Kisan Samman Nidhi (PM-KISAN) scheme on 14th May at 11 AM via video conferencing. This will enable the transfer of more than Rs. 19,000 crores to more than 9.5 cr beneficiary farmer families: PMO pic.twitter.com/9uBDAF0UYO
— ANI (@ANI) May 13, 2021
ಅಂದ್ಹಾಗೆ, ಪಿಎಂ-ಕಿಸಾನ್ ಯೋಜನೆಯಡಿ, ಅರ್ಹ ಫಲಾನುಭವಿ ರೈತ ಕುಟುಂಬಗಳಿಗೆ ವರ್ಷಕ್ಕೆ ₹6000 ಆರ್ಥಿಕ ಪ್ರಯೋಜನವನ್ನ ಒದಗಿಸಲಾಗುತ್ತದೆ. ಅದ್ರಂತೆ, ಮೂರು ಕಂತುಗಳನ್ನ ಪ್ರತಿ ನಾಲ್ಕು ತಿಂಗಳಿಗೊಮ್ಮೆ ತಲಾ ₹2,000 ಪಾವತಿಸುತ್ತಿದೆ. ನಿಧಿಯನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.
'ಈ ಯೋಜನೆಯಡಿ ಇಲ್ಲಿಯವರೆಗೆ ₹1.15 ಲಕ್ಷ ಕೋಟಿಗಳನ್ನ ರೈತ ಕುಟುಂಬಗಳಿಗೆ ವರ್ಗಾಯಿಸಲಾಗಿದೆ' ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು 2019ರ ಮಧ್ಯಂತರ ಕೇಂದ್ರ ಬಜೆಟ್ʼನಲ್ಲಿ ಘೋಷಿಸಿದರು. ಈ ಯೋಜನೆಯು ಡಿಸೆಂಬರ್ 2019ರಿಂದ ಜಾರಿಗೆ ಬಂದ ನಂತರ ಸರ್ಕಾರಕ್ಕೆ ವರ್ಷಕ್ಕೆ 75,000 ಕೋಟಿ ವೆಚ್ಚವಾಗಲಿದೆ.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now