Kannada News Now

1.7M Followers

BREAKING NEWS: ನಾಳೆಯಿಂದ 'ರಾಜ್ಯ ಸರ್ಕಾರಿ ನೌಕರ'ರ ವರ್ಗಾವಣೆ ಆರಂಭ: ಆಯಾ 'ಇಲಾಖೆ ಸಚಿವ'ರಿಗೆ 'ವರ್ಗಾವಣೆ ಹೊಣೆಗಾರಿಕೆ'

30 Apr 2022.7:55 PM

ವರದಿ: ವಸಂತ ಬಿ ಈಶ್ವರಗೆರೆ

ಬೆಂಗಳೂರು: ಶೇ.6ರಷ್ಟು ಮೀರದಂತೆ ರಾಜ್ಯದ ಸರ್ಕಾರಿ ನೌಕರರ ವರ್ಗಾವಣೆಗೆ ( Karnataka Government Employees ) ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದರ ಜೊತೆ ಜೊತೆಗೆ ವರ್ಗಾವಣೆಯ ಹೊಣೆಗಾರಿಕೆಯನ್ನು ಆಯಾ ಇಲಾಖಾ ಸಚಿವರಿಗೆ ನೀಡಿ ಆದೇಶಿಸಿದೆ.

'ಪಾರ್ಕ್'ನಲ್ಲೇ ಕುಸಿದು ಬಿದ್ದ ವ್ಯಕ್ತಿ, ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ 'ಆರಕ್ಷಕ'ರು: ಇವರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

ಈ ಬಗ್ಗೆ ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ಸರ್ಕಾರಿ ನೌಕರರ ವರ್ಗಾವಣೆ ( Transfer of Government Employees ) ಕುರಿತಂತೆ ವಿಸ್ತೃತವಾದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಮಾರ್ಗಸೂಚಿಗಳ ಪ್ರಕಾರ ಸರ್ಕಾರಿ ನೌಕರರ ವರ್ಗಾವಣೆಗಳನ್ನು ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳುಗಳಲ್ಲಿ ಮಾತ್ರ ಷರತ್ತುಗಳಿಗೆ ಒಳಪಟ್ಟು ಮಾಡಬಹುದಾಗಿದೆ.

ರಾಜ್ಯದ 'ರಾಗಿ ಬೆಳೆಗಾರ'ರಿಗೆ ಗುಡ್ ನ್ಯೂಸ್: 3 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ರಾಗಿ ಖರೀದಿಗೆ ಕೇಂದ್ರದ ಒಪ್ಪಿಗೆ

2022-23ನೇ ಸಾಲಿಗೆ ಗ್ರೂಪ್-ಎ, ಗ್ರೂಪ್-ಬಿ, ಗ್ರೂಪ್ ಸಿ ಮತ್ತು ಗ್ರೂಪ್-ಡಿ ವರ್ಗದ ಅಧಿಕಾರಿ, ನೌಕರರಿಗೆ ಅನ್ವಯವಾಗುವಂತೆ ಒಂದು ಜೇಷ್ಠತಾ ಘಟದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ನ್ನು ಮೀರದಂತೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ಪ್ರತ್ಯಾಯೋಜಿಸಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಿಎಸ್‌ಐ ಮರು ಪರೀಕ್ಷೆ ಬೇಡ - ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಶೇ.6ರಷ್ಟು ಗ್ರೂಪ್-ಎ, ಬಿ, ಸಿ ಮತ್ತು ಡಿ ವರ್ಗದ ಅಧಿಕಾರಿ, ನೌಕರಿಗೆ ಅನ್ವಯವಾಗುವಂತೆ ದಿನಾಂಕ 01-05-2022ರಿಂದ ದಿನಾಂಕ 15-06-2022ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ಪ್ರತ್ಯಾಯೋಜಿಸಿ, ರಾಜ್ಯ ಸರ್ಕಾರ ಆದೇಶಿಸಿದೆ.


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags