Kannada News Now
1.8M Followersನವದೆಹಲಿ : ಈಗಾಗಲೇ ಕೊರೋನಾ ಸೋಂಕನ್ನು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಸೇರಿಸಿರುವಂತ ಕೇಂದ್ರ ಸರ್ಕಾರ, ಇದೀಗ ದೇಶದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವಂತ ಕಪ್ಪು ಶಿಲೀಂದ್ರವನ್ನು ಕೂಡ, ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಸೇರಿಸುವಂತೆ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಈ ಮೂಲಕ ಬ್ಲ್ಯಾಕ್ ಫಂಗಸ್ ಕೂಡ, ಈಗ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿ ಸೇರ್ಪಡೆಗೊಂಡಂತೆ ಆಗಿದೆ.
ತಮಿಳುನಾಡಿಲ್ಲಿ 'ಕೊರೋನಾ' ರಕ್ಷಣೆ ಕೋರಿ, ಜನರು ಮಾಡಿದ್ದೇನು ಗೊತ್ತಾ.?
ಸಾಮಾನ್ಯವಾಗಿ ಕಪ್ಪು ಶಿಲೀಂಧ್ರ ಎಂದು ಕರೆಯಲ್ಪಡುವ ಮ್ಯೂಕಾರ್ಮೈಕೋಸಿಸ್ ಅನ್ನು ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ರ ಅಡಿಯಲ್ಲಿ ಸೂಚಿಸಬಹುದಾದ ರೋಗವನ್ನಾಗಿ ಮಾಡುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಮೇ 20 ರ ಗುರುವಾರ ರಾಜ್ಯಗಳಿಗೆ ಸೂಚಿಸಿದೆ.
'ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳು, ವೈದ್ಯಕೀಯ ಕಾಲೇಜುಗಳು ಎಂಒಎಚ್ ಎಫ್ ಡಬ್ಲ್ಯೂ ಮತ್ತು ಐಸಿಎಂಆರ್ ಹೊರಡಿಸಿದ ತಪಾಸಣೆ, ರೋಗನಿರ್ಣಯ, ಮ್ಯೂಕಾರ್ಮೈಕೋಸಿಸ್ ನಿರ್ವಹಣೆಗೆ ಮಾರ್ಗಸೂಚಿಗಳನ್ನು ಅನುಸರಿಸಬೇಕು' ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
Union Health Ministry urged States to make mucormycosis a notifiable disease under the Epidemic Diseases Act 1897
— ANI (@ANI) May 20, 2021
Disclaimer
This story is auto-aggregated by a computer program and has not been created or edited by Dailyhunt Publisher: Kannada News Now