Dailyhunt Logo
  • Light mode
    Follow system
    Dark mode
    • Play Story
    • App Story
BREAKING  :ಪಂಜಾಬ್‌ನಲ್ಲಿ ಎಎಪಿ ನಾಯಕ ಗುರ್‌ಪ್ರೀತ್ ಸಿಂಗ್ ಗೋಪಿ ಗುಂಡಿಕ್ಕಿ ಹತ್ಯೆ: ದುಷ್ಕರ್ಮಿಗಳಿಂದ ಚೇಸ್ ಮಾಡಿ ಗುಂಡಿನ ದಾಳಿ

BREAKING :ಪಂಜಾಬ್‌ನಲ್ಲಿ ಎಎಪಿ ನಾಯಕ ಗುರ್‌ಪ್ರೀತ್ ಸಿಂಗ್ ಗೋಪಿ ಗುಂಡಿಕ್ಕಿ ಹತ್ಯೆ: ದುಷ್ಕರ್ಮಿಗಳಿಂದ ಚೇಸ್ ಮಾಡಿ ಗುಂಡಿನ ದಾಳಿ

Kannada News Now 2 weeks ago

ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಮಮದೋಟ್ ಪಟ್ಟಣದಲ್ಲಿ ಆಮ್ ಆದ್ಮಿ ಪಕ್ಷದ (AAP) ನಾಯಕ ಗುರ್‌ಪ್ರೀತ್ ಸಿಂಗ್ ಅಲಿಯಾಸ್ ಗೋಪಿ ಅವರನ್ನು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಬೆನ್ನಟ್ಟಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ

ಎಎಪಿ ನಾಯಕ ಗೋಪಿ ಅವರು ಹರ್‌ಪ್ರೀತ್ ಎಂಬವರೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಕಾರಿನಲ್ಲಿ ಬಂದ ನಾಲ್ಕೂ ಮಂದಿ ಸಶಸ್ತ್ರ ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿ ಚೇಸ್ ಮಾಡಿದ್ದಾರೆ.

ಬಳಿಕ ಬೈಕನ್ನು ಅಡ್ಡಗಟ್ಟಿ ಮನಬಂದಂತೆ ಹತ್ತಾರು ರೌಂಡ್ ಗುಂಡಿನ ದಾಳಿ ನಡೆಸಿದ್ದಾರೆ.ಪರಿಣಾಮ ತೀವ್ರವಾಗಿ ಗಾಯಗೊಂಡ ಗೋಪಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪಂಜಾಬ್ ಎಸ್‌ಎಸ್‌ಪಿ ಭೂಪಿಂದರ್ ಸಿಂಗ್ ಸಿಧು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಈ ಭೀಕರ ಹತ್ಯೆಯು ಹಳೆಯ ವೈಯಕ್ತಿಕ ದ್ವೇಷದಿಂದ ನಡೆದಿರುವ ಸಾಧ್ಯತೆಯಿದೆ.ಸ್ಥಳೀಯ ಚುನಾವಣೆ ಹಾಗೂ ರಾಜಕೀಯ ವೈಷಮ್ಯದ ಕೋನದಲ್ಲೂ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ

Dailyhunt
Disclaimer: This content has not been generated, created or edited by Dailyhunt. Publisher: Kannada News Now