Dailyhunt Logo
  • Light mode
    Follow system
    Dark mode
    • Play Story
    • App Story
BREAKING : SIR ಪರಿಷ್ಕರಣೆ ವೇಳೆ 28 ವಿಧಾನಸಭಾ ಕ್ಷೇತ್ರದಲ್ಲಿ 50 ಲಕ್ಷ ಮತದಾರರು ಡಿಲೀಟ್ : ಬೆಂಗಳೂರಲ್ಲೆ ಹೆಚ್ಚು!

BREAKING : SIR ಪರಿಷ್ಕರಣೆ ವೇಳೆ 28 ವಿಧಾನಸಭಾ ಕ್ಷೇತ್ರದಲ್ಲಿ 50 ಲಕ್ಷ ಮತದಾರರು ಡಿಲೀಟ್ : ಬೆಂಗಳೂರಲ್ಲೆ ಹೆಚ್ಚು!

Kannada News Now 1 week ago

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದಲ್ಲಿ 49.34 (47.75) ಲಕ್ಷ ಮತದಾರರ ಹೆಸರು ರದ್ದಾಗಲಿದೆ. 2026ರ ಜೂ.16ರ ಮತದಾರರ ಪಟ್ಟಿ ಪ್ರಕಾರ ಬೆಂಗಳೂರಿನ 4 ಜಿಲ್ಲೆಗಳ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,03,88,363 ಮತದಾರರು ಇದ್ದಾರೆ.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಣೆ ವೇಳೆ ಗೈರು/ಪತ್ತೆಯಾಗದವರು, ಶಾಶ್ವತ ಸ್ಥಳಾಂತರ, ಮೃತರು, ಈಗಾಗಲೇ ಬೇರೆಕಡೆ ನೋಂದಣಿ ಹಾಗೂ ಇತರೆ (ಎಎಸ್‌ಡಿಡಿಒ) ವರ್ಗದಡಿ 49.34 ಲಕ್ಷ ಮತದಾರರನ್ನು ಸೇರಿಸಲಾಗಿದೆ.

ಈ ಮತದಾರರ ಹೆಸರು ಹಾಲಿ ಮತದಾರರ ಪಟ್ಟಿಯಿಂದ ಡಿಲೀಟ್ ಆಗಲಿದೆ. ಅಂದರೆ, ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟವಾಗುವುದಿಲ್ಲ. ಸ್ಥಳಾಂತರಗೊಂಡ ಮತದಾರರ ಪ್ರಮಾಣವೇ ಹೆಚ್ಚಿದೆ. ಈ ಮತದಾರರು ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ನಿಗದಿತ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆ ಜತೆಗೆ ಫಾರ್ಮ್ 6 ಭರ್ತಿ ಮಾಡಿ ಸಲ್ಲಿಸಿದರೆ, ಬಿಎಲ್‌ಒ/ಇಆರ್‌ಒ ಮತದಾರರ ជ ಪರಿಶೀಲಿಸಿ ಸೇರ್ಪಡೆಗೊಳಿಸಲಿದ್ದಾರೆ.

1.03 ಕೋಟಿ ಮತದಾರರ ಪೈಕಿ 49.34 ಲಕ್ಷ ಹೆಸರು ಡಿಲೀಟ್:

ಬೆಂಗಳೂರು ನಗರ ಜಿಲ್ಲೆಯಲ್ಲಿ ಹಾಲಿ ಮತದಾರರ ಪಟ್ಟಿಯಲ್ಲಿರುವ 40,21,039 ಮತದಾರರ ಪೈಕಿ 18,10,111 (ಶೇ.45.02), ಬಿಬಿಎಂಪಿ ಉತ್ತರ ಜಿಲ್ಲೆಯಲ್ಲಿ 23,32,621 ಮತದಾರರ ಪೈಕಿ 11,05,176 (ಶೇ.47.38), ಬಿಬಿಎಂಪಿ ಕೇಂದ್ರ ಜಿಲ್ಲೆಯಲ್ಲಿ 18,89,919 ಮತದಾರರ ಪೈಕಿ 9,13,442 (.48.33), ಬಿಬಿಎಂಪಿ ದಕ್ಷಿಣ ಜಿಲ್ಲೆಯಲ್ಲಿ 21,44,784 ಮತದಾರರ ಪೈಕಿ 11,06,170 (ಶೇ.51.57) ಮತದಾರರು ಹೆಸರು ರದ್ದಾಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now