ಬೆಂಗಳೂರು : ದೇಶದಲ್ಲೇ ಮೊದಲ ಬಾರಿ ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ನಡೆಯುತ್ತಿರುವ ಚರ್ಚೆಗೆ ಬೆಂಬಲ ನೀಡಿ ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಾಂಗ್ರೆಸ್ ಸದಸ್ಯರಿಗೆ ಮನವಿ ಮಾಡಿಕೊಂಡರೂ ಕಾಂಗ್ರೆಸ್ ಸದಸ್ಯರು ತಮ್ಮ ಪಟ್ಟು ಸಡಿಲಿಸಲಿಲ್ಲ. ಸದನದಲ್ಲಿ ಪ್ರತಿಭಟನೆಯಿಂದಾಗಿ ಸಭಾಧ್ಯಕ್ಷರಾದಂತ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿಧಾನಸಭೆಯ ಕಲಾಪವನ್ನು ಸೋಮವಾರ ಮಧ್ಯಾಹ್ನ 12ಕ್ಕೆ ಮುಂದೂಡಿಕೆ ಮಾಡಿದರು.
'ಕೃಷಿ ಕಾಯಕದ ರಾಯಭಾರಿ'ಯಾಗಿ ಅಧಿಕಾರ ಸ್ವೀಕರಿಸಿದ 'ಚಾಲೆಂಜಿಂಗ್ ಸ್ಟಾರ್ ದರ್ಶನ್'
ಬಜೆಟ್ ಅಧಿವೇಶನದ ಎರಡನೇ ದಿನವಾದ ಇಂದೂ ಕಾಂಗ್ರೆಸ್ ಸದಸ್ಯರ ಧರಣಿ ಮುಂದುವರಿದಾಗ ಸಭಾಧ್ಯಕ್ಷರು ಪ್ರತಿಭಟನೆ ಕೈಬಿಟ್ಟು ಚರ್ಚೆಗೆ ಬರುವಂತೆ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಮನವಿ ಮಾಡಿದರು.
ಈ ದೇಶದಲ್ಲಿ ಹಲವು ಮಹತ್ವದ ಕೆಲಸಗಳಿಗೆ ಕರ್ನಾಟಕದಿಂದ ಚಾಲನೆ ದೊರೆತಿದೆ. ಈಗ ಪುನಃ ಅಂತಹ ಮತ್ತೊಂದು ಅವಕಾಶ ಬಂದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸಹಕಾರ ಕೊಡಬೇಕು. ಒಂದು ವೇಳೆ ನಿಮ್ಮ ವಿರೋಧವಿದ್ದರೆ ಯಾವ ಕಾರಣಕ್ಕಾಗಿ ನಿಮ್ಮ ವಿರೋಧವಿದೆ ಎಂಬುದನ್ನಾದರೂ ಹೇಳಿ ಎಂದು ಕೇಳಿಕೊಂಡರು.
'ರಮೇಶ್ ಜಾರಕಿಹೊಳಿ ರಾಸಲೀಲೆ' ವೀಡಿಯೋದಲ್ಲಿ ಮಚ್ಚೆ ಹುಡುಕಿದ ಆಪ್ತ ಶಾಸಕ
ಪ್ರಜಾಪ್ರಭುತ್ವವನ್ನು ಬಲಪಡಿಸುವ ವಿಷಯದಲ್ಲಿ ಕರ್ನಾಟಕದಿಂದಲೂ ಮಹತ್ವದ ಸಂದೇಶ ರವಾನೆಯಾಗಲಿ. ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಇದು ಸರಿಯಾದ ಕ್ರಮವಲ್ಲ. ಡಿ.ಕೆ. ಶಿವಕುಮಾರ್ ಅವರೆ ನೀವೇ ಹೇಳಿ ನಿಮ್ಮ ಶಾಸಕರಿಗೆ ಚರ್ಚೆಗೆ ಅವಕಾಶ ಕೊಡಿ, ಇದಕ್ಕೆ ನಿಮ್ಮ ಸಹಕಾರವಿರಲಿ ಎಂದು ಕೋರಿದರು.
BIG BREAKING : 'ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ' ಪ್ರಸಾರ ಮಾಡದಂತೆ 'ಸಿಟಿ ಸಿವಿಲ್ ಕೋರ್ಟ್' ಆದೇಶ
ಆದರೆ ಸಭಾಧ್ಯಕ್ಷರ ಮಾತನ್ನು ಕಾಂಗ್ರೆಸ್ ಸದಸ್ಯರು ಒಪ್ಪದೆ ತಮ್ಮ ಧರಣಿ ಮುಂದುವರಿಸಿದರು. ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ನಮ್ಮ ಹಕ್ಕುಗಳನ್ನು ಹರಣ ಮಾಡುತ್ತಿದ್ದಿರಾ, ಪ್ರತಿಭಟನೆ ಮಾಡುವುದು ನಮ್ಮ ಹಕ್ಕು. ಶಾಸಕ ಸಂಗಮೇಶ್ ಅವರ ಅಮಾನತು ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಮತ್ತೆ ಒತ್ತಾಯಿಸಿದರು. ಇದರಿಂದಾಗಿ ವಿಧಾನಸಭೆಯ ಕಲಾಪವನ್ನು ಸೋಮವಾರ ಮಧ್ಯಾಹ್ನ 12ಕ್ಕೆ ಸಭಾಧ್ಯಕ್ಷರು ಮುಂದೂಡಿಕೆ ಮಾಡಿದರು.

