Wednesday, 16 Sep, 7.27 pm Kannada News Now

ಕರ್ನಾಟಕ
BREAKING : ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಕೇಸ್ ; ರಾಗಿಣಿ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿಗೆ ನಟಿ 'ಸಂಜನಾ ಗರ್ಲಾನಿ' ಶಿಫ್ಟ್

ಬೆಂಗಳೂರು: ಕನ್ನಡ ನಟಿ ಸಂಜನಾ ಗಲ್ರಾನಿಯನ್ನು 1 ನೇ ಎಸಿಎಂಎಂ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಸದ್ಯ ನಟಿ ಸಂಜನಾರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗುತ್ತಿದ್ದು, ಈಗಾಗಲೇ ನಟಿ ಸಂಜನಾರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಗಂಡ ಹೆಂಡತಿ ಸಿನಿಮಾದ ಮೂಲಕ ಕಿಚ್ಚು ಹಚ್ಚಿಸಿದ್ದ ಮಾದಕ ನಟಿಗೆ ಜೈಲೂಟ ಗ್ಯಾರೆಂಟಿಯಾಗಿದೆ.

ಸಂಜನಾ ಜೊತೆಗೆ, ಆರೋಪಿ ವಿರೇನ್ ಖನ್ನಾ, ರವಿಶಂಕರ್ ಮತ್ತು ಇತರರನ್ನು ನ್ಯಾಯಾಂಗ ವಶಕ್ಕೆ ಕಳುಹಿಸಲಾಗಿದೆ. ಸೆಪ್ಟೆಂಬರ್ 16 ರಂದು ಸಂಜನಾ ಮತ್ತು ಇತರ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸ್ಯಾಂಡಲ್ ವುಡ್ ಡ್ರಗ್ ರಾಕೆಟ್ ಪ್ರಕರಣದಲ್ಲಿ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಕಸ್ಟಡಿಗೆ ಕಳುಹಿಸಿದೆ.

BIG BREAKING: ರಾಗಿಣಿಯಾಯ್ತು ಈಗ ನಟಿ ಸಂಜನಾಗೂ ಜೈಲು: 2 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದ ಕೋರ್ಟ್..!

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top