Monday, 25 Jan, 9.35 am Kannada News Now

ವಿಶ್ವ
ಬ್ರೇಕಿಂಗ್ : ಬ್ರೆಜಿಲ್ : ಲಘು ವಿಮಾನ ಅಪಘಾತ : ನಾಲ್ವರು ಫುಟ್ ಬಾಲ್ ಆಟಗಾರರು ಸಾವು

ಸಾವೊ ಪೋಲೊ: ಲಘು ವಿಮಾನವೊಂದು ಟೇಕ್ ಆಫ್ ವೇಳೆ ಅಪಘಾತಗೀಡಾಗಿದ್ದು, ವಿಮಾನದಲ್ಲಿದ್ದ ಫುಟ್ ಬಾಲ್ ಆಟಗಾರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬ್ರೆಜಿಲಿಯನ್ ಕಪ್ ಟೂರ್ನಿಯ ಪಂದ್ಯದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಆಟಗಾರರಿದ್ದ ಲಘು ವಿಮಾನ ಟೇಕ್ ಆಫ್ ಸಂದರ್ಭದಲ್ಲಿ ಅಪಘಾತಕ್ಕೆ ಈಡಾಗಿದೆ. ಈ ವೇಳೆ ಪಲ್ಮಾಸ್ ಫುಟ್‌ಬಾಲ್ ಕ್ಲಬ್‌ನ ಅಧ್ಯಕ್ಷ ಮತ್ತು ನಾಲ್ವರು ಆಟಗಾರರು ಸಾವನ್ನಪ್ಪಿದ್ದಾರೆ.

ಜ. 25 ರಾಷ್ಟ್ರೀಯ ಪ್ರವಾಸೋಧ್ಯಮ ದಿನ : ದೇಶದ ಪ್ರವಾಸೋದ್ಯಮದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ್ದು ಇಷ್ಟು…

ಮೂಲಗಳ ಪ್ರಕಾರ ಕ್ಲಬ್ ಅಧ್ಯಕ್ಷ ಲೂಕಾಸ್‌ ಮೇರಾ, ಆಟಗಾರರಾದ ಲೂಕಾಸ್ ಪ್ರಕ್ಸಿಡಿಸ್‌, ಗುಲೆರ್ಮೆ ನೊಯೆ, ರಣುಲ್‌ ಮತ್ತು ಮಾರ್ಕಸ್ ಮೋಲಿನರಿ ಸಾವಿಗೀಡಾಗಿದ್ದಾರೆ ಎಂದು ಕ್ಲಬ್ ತಿಳಿಸಿದೆ. ದುರಂತದಲ್ಲಿ ಲಘು ವಿಮಾನದ ಪೈಲಟ್‌ ಕೂಡ ಸಾವಿಗೀಡಾಗಿದ್ದಾರೆ.

ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ ಸೇರಿಕೊಳ್ಳಿ
https://bit.ly/367sVuW



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top