ಕರ್ನಾಟಕ
ಬ್ರೇಕಿಂಗ್: ದೆಹಲಿ ಟ್ರ್ಯಾಕ್ಟರ್ ಗಲಭೆ ಪ್ರಕರಣ: ಹಿಂಸೆ ಪ್ರಚೋದಿಸುವ ಮಾಹಿತಿ, ಖಾಲಿಸ್ತಾನ ಮೂಲದ ʼ550 ಖಾತೆʼಗಳು ʼಟ್ವಿಟರ್ʼನಿಂದ ಔಟ್..!

ನವದೆಹಲಿ: ರೈತರ ಗಣರಾಜ್ಯೋತ್ಸವ ಟ್ರ್ಯಾಕ್ಟರ್ ರ್ಯಾಲಿ ವೇಳೆ ಹಿಂಸಾಚಾರವನ್ನ ಪ್ರಚೋದಿಸುವಂತಹ ಟ್ವೀಟ್ʼಗಳನ್ನ ಮಾಡಿದ್ದ ಖಲಿಸ್ತಾನದ 550 ಖಾತೆಗಳನ್ನ ಟ್ವಿಟ್ಟರ್ ಸ್ಥಗಿತಗೊಳಿಸಿದೆ.
ಮೈಕ್ರೋ ಬ್ಲಾಗಿಂಗ್ ವೆಬ್ ಸೈಟ್ʼನ ವಕ್ತಾರರು ಈ ವಿಷಯ ತಿಳಿಸಿದ್ದು, 'ಸ್ಪ್ಯಾಮ್ ಮತ್ತು ಪ್ಲಾಟ್ ಫಾರ್ಮ್ ಕೈಚಳಕದಲ್ಲಿ ತೊಡಗಿರುವ ಬಳಕೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ' ಎಂದಿದ್ದಾರೆ.
'ನಮ್ಮ ನಿಯಮಗಳನ್ನ ಉಲ್ಲಂಘಿಸುವ ಪ್ರವೃತ್ತಿಗಳನ್ನ ನಿರ್ಬಂಧಿಸುವ ಮೂಲಕ ಆಫ್ ಲೈನ್ ಹಾನಿಯ ಅಪಾಯವನ್ನ ಅಂದ್ರೆ, ಹಿಂಸೆ, ದುರುಪಯೋಗ ಮತ್ತು ಬೆದರಿಕೆಗಳನ್ನ ಪ್ರಚೋದಿಸುವ ಸಂಭಾಷಣೆಗಳನ್ನ ತೆಗೆದು ಹಾಕಿದ್ದು, ಸಮಾಜವನ್ನ ರಕ್ಷಿಸಲು ನಾವು ಬಲವಾದ ಕ್ರಮಗಳನ್ನ ಕೈಗೊಂಡಿದ್ದೇವೆ' ಎಂದು ವಕ್ತಾರರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ದೇಶದ ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳ
'ತಂತ್ರಜ್ಞಾನ ಮತ್ತು ಮಾನವ ವಿಮರ್ಶೆಯ ಸಂಯೋಜನೆಯನ್ನ ಬಳಸಿಕೊಂಡು, ಟ್ವಿಟರ್ʼನ ನೂರಾರು ಖಾತೆಗಳು ಮತ್ತು ಟ್ವೀಟ್ʼಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಸ್ಪ್ಯಾಮ್ ಮತ್ತು ಪ್ಲಾಟ್ ಫಾರ್ಮ್ ಮ್ಯಾನಿಪ್ಯುಲೇಶನ್ʼನಲ್ಲಿ ತೊಡಗಿರುವ 550 ಕ್ಕೂ ಹೆಚ್ಚು ಖಾತೆಗಳನ್ನ ಅಮಾನತುಗೊಳಿಸಲಾಗಿದೆ' ಎಂದು ಅವರು ಹೇಳಿದರು.
ʼಆಧಾರ್ ಕಾರ್ಡ್ʼಗೆ ಮೊಬೈಲ್ ನಂಬರ್ ಲಿಂಕ್ ಮಾಡಿದ್ರೆ, ನೀವು ಮನೆಯಲ್ಲಿಯೇ ಕುಳಿತು ಈ ಎಲ್ಲ ಚೇಂಜಸ್ ಮಾಡ್ಬೋದು..!