ಭಾರತ
ಬ್ಯಾಡ್ಮಿಂಟನ್ ತಾರೆ ʼಗುರುಸಾಯಿದತ್ʼ ಮದುವೆಗೆ ಡೇಟ್ ಫಿಕ್ಸ್: ಸಾಯಿ ಮನಸ್ಸು ಕದ್ದ ಸುಂದರಿ ಯಾರು ಗೊತ್ತಾ?

ಹೈದರಾಬಾದ್: ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಗುರುಸಾಯಿದತ್ ಸಪ್ತಪದಿ ತುಳಿಯಲು ಸಿದ್ಧವಾಗಿದ್ದು, ಬುಧವಾರ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಅವರಿಬ್ಬರ ನಿಶ್ಚಿತಾರ್ಥ ನೆರವೇರಿತ್ತಾದ್ರು ಕೊರೊನಾ ಲಾಕ್ಡೌನ್ʼನಿಂದ ಮದುವೆ ಯೋಜನೆ ಮುಂದೊಗಿತ್ತು. ಸಧ್ಯ ಆಸ್ಟ್ರೇಲಿಯಾದಲ್ಲಿರುವ ಗುರುಸಾಯಿದತ್ ಅವರ ಅಕ್ಕ ಕೂಡ ಭಾರತಕ್ಕೆ ಹಿಂದಿರುಗಿದ್ದು,
ವಿವಾಹವನ್ನ ನಿಗದಿಪಡಿಸಲಾಗಿದೆ ಎನ್ನಲಾಗ್ತಿದೆ.
ಈ ಬ್ಯಾಡ್ಮಿಂಟನ್ ತಾರೆಯದ್ದು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದು, ಸತಿಯಾಗಲಿರುವ ಅವ್ರ ಅಮೂಲ್ಯ ಬಾಲ್ಯದ ಗೆಳತಿ.
ಅಂದ್ಹಾಗೆ, ಹೈದರಾಬಾದ್ನಲ್ಲಿ ಈಗ ಆರ್ಕಿಟೆಕ್ಟ್ ಆಗಿರುವ ಅಮೂಲ್ಯ ಜತೆಗಿನ ಗೆಳತನ ಮತ್ತು ಪ್ರೀತಿಯ ಬಗ್ಗೆ ಸ್ವತಃ ಗುರುಸಾಯಿದತ್ ವಿವರಿಸಿದ್ದು, 'ಶಾಲಾ ದಿನಗಳಲ್ಲಿ ನಾವಿಬ್ಬರು ಕ್ಲಾಸ್ಮೇಟ್ಸ್ ಆಗಿದ್ದೆವು. ಆದರೆ ಬಳಿಕ ಇಬ್ಬರೂ ಸಂಪರ್ಕದಲ್ಲಿರಲಿಲ್ಲ. 2019ರ ಡಿಸೆಂಬರ್ನಲ್ಲಿ ನಮ್ಮ ಶಾಲೆಯವರೆಲ್ಲರೂ ಮರಳಿ ಒಗ್ಗೂಡಿದಾಗ ಅಮೂಲ್ಯಳನ್ನು ಮತ್ತೆ ಭೇಟಿಯಾಗಿದ್ದೆ. ನಂತರ ಸಂಪರ್ಕ ಮುಂದುವರಿಸುತ್ತ ಬಂದೆವು. ಕೆಲ ತಿಂಗಳಲ್ಲೇ ಹತ್ತಿರವಾದೆವು. ಬಳಿಕ ನಮ್ಮಿಬ್ಬರ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದೆವು. ಮದುವೆಯಾಗುವೆಯಾ ಎಂದು ನಾನು ಕೇಳಿದಾಗ ಆಕೆ ಎಸ್ ಎಂದಳು. ಬಳಿಕ ನಮ್ಮಿಬ್ಬರ ಕುಟುಂಬದವರು ಪರಸ್ಪರ ಚರ್ಚಿಸಿ ಮೊದಲಿಗೆ ನಿಶ್ಚಿತಾರ್ಥ ಸಮಾರಂಭ ನೆರವೇರಿಸಿದ್ದರು' ಎಂದು ಹೇಳಿದ್ದಾರೆ.
ಇನ್ನು ಇವರವಿವಾಹಕ್ಕಾಗಿ ಹೈದರಾಬಾದ್ ಹೊರವಲಯದ ರೆಸಾರ್ಟ್ನಲ್ಲಿ ಬಯೋ-ಬಬಲ್ ವಾತಾವರಣ ನಿರ್ಮಿಸಲಾಗಿದೆ. ಈ ಮೂಲಕ ಕುಟುಂಬದ ಎಲ್ಲ ಹಿರಿಯ-ಕಿರಿಯ ಸದಸ್ಯರೂ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಈ ಮದುವೆಗೆ ಕುಟುಂಬದ ಆಪ್ತರ ಜತೆಗೆ ಬ್ಯಾಡ್ಮಿಂಟನ್ ವಲಯದ ಎಲ್ಲ ಸಹ-ಷಟ್ಲರ್ಗಳು ಕೂಡ ಪಾಲ್ಗೊಳ್ಳಲಿದ್ದಾರೆ ಎನ್ನಲಾಗ್ತಿದೆ.